ಲಿಂಗಸೂಗೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ದಿ ಹಾಗೂ ಡಾ: ಮಾನಪ್ಪ ಡಿ. ವಜ್ಜಲರ ಜನಪರ ಕಾರ್ಯಗಳನ್ನು ಮೆಚ್ಚಿ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 11 ರ ಮಹಿಳಾ ಸದಸ್ಯರಾದ ಮಂಜುಳಾ, ಶಂಕ್ರಮ್ಮ, ಕಸ್ತೂರಿ, ಅನ್ನಪೂರ್ಣ, ಮಹಾಂತಮ್ಮ, ಅಮರಮ್ಮ, ಶಿವಲಿಲಾ, ವೀಣಾ, ಸೇರಿದಂತೆ ಹಲವು ಮಹಿಳಾ ಸದಸ್ಯರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಸ್ವಯಂ ಪ್ರೇರಿತರಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಶಿವಬಸಪ್ಪ ಹೆಸರೂರು, ಹಾಗೂ ಪಕ್ಷದ ಹಿರಿಯ ಮುಖಂಡರಾದ ಲಿಂಗಣ್ಣ ದೇವಿಕೇರಿ, ಗೋವಿಂದ ನಾಯಕ್, ಹುಲ್ಲೇಶ ಸಾಹುಕಾರ್, ರವಿಗೌಡ ಹಾಲಭಾವಿ, ಬಸವರಾಜ್, ಈರಪ್ಪ, ದೇವರಾಜ್ ಹಟ್ಟಿ, ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಶ್ರೀಮತಿ ಶೋಭಾ ಕಾಟವಾ, ಜೋತಿ ಸುಂಕದ, ಸ್ಮಿತಾ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.