ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ
ಇಂಡಿ: ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವದು ಆತಂಕಕಾರಿ ವಿಷಯ ಎಂದು ಅರಿತು ಅವುಗಳನ್ನು ಕಿಂಚಿತ್ತಾದರೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಮಠದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯ ದಿನದಂದು ೬೦ ವರ್ಷಗಳ ಕಾಲ ಮಾದರಿಯಾಗಿ ಕುಟುಂಬದ ಹೊಣೆ ಹೊತ್ತು ಸಾಗಿರುವ ವೃದ್ಧ ದಂಪತಿಗಳನ್ನು ಆಯ್ಕೆ ಮಾಡಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದು ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಅವರು ಶುಕ್ರವಾರ ಸಾಯಂಕಾಲ ಇಂಡಿ ನಗರದ ಶಿರಶ್ಯಾಡ ಶಾಖಾ ಮಠದಲ್ಲಿ ಆಯೋಜಿಸಿದ್ದ ೫ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮದ ಸಾನಿಧ್ಯತೆ ವಹಿಸಿ ಆಶಿರ್ವಚನ ನೀಡಿದರು.
ವೃದ್ಧರನ್ನು ಗೌರವಿಸುವದು, ಅವರ ಅನುಭವಗಳನ್ನು ಹಂಚಿಕೊಳ್ಳುವದರಿAದ ಇಂದಿನ ಯುವಕರಲ್ಲಿ ತಮ್ಮ ಹಿರಿಯರ ಬಗ್ಗೆ ಗೌರವ ಮೂಡಲಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬುದು ನಮ್ಮ ಪ್ರಯತ್ನ ಎಂದರು.
ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು, ಅದನ್ನು ವಿದೇಶಿಯರು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮವರೇ ಅದನ್ನು ಮರೆಯುತ್ತಿದ್ದಾರೆ. ಕಾರಣ ನಮ್ಮ ಸಂಸ್ಕೃತಿ ನೆನಪಿಸಲು ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದ ಅವರು ಈ ಕಾರ್ಯಕ್ರಮದಲ್ಲಿ ವೃದ್ಧ ದಂಪತಿಗಳಿಗಲ್ಲದೇ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ, ದೇಶ ರಕ್ಷಿಸುವ ಸೈನಿಕರಿಗೆ, ಶಿಕ್ಷಣ ತಜ್ಞರಿಗೆ, ಕ್ರೀಡೆಯಲ್ಲಿ ಸಧನೆ ಮಾಡಿದ ಕ್ರೀಡಾಪಟುಗಳಿಗೆ, ವಿಜ್ಞಾನಿಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಲ್ಲದೇ ಇನ್ನಿತರ ಇಲಾಖೆಗಳಲ್ಲಿಯ ಸಾಧಕರಿಗೆ ಕರೆದು ಅವರನ್ನು ಗೌರವಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಯುವಕರಿಗೆ ನಮ್ಮ ದೇಶದ ಸಂಸ್ಕೃತಿಯ ಅರಿವು ಆಗಲಿದೆ ಎಂದರು.
ಐಡಿಯಾ ಕಾಲೇಜಿನ ನಿರ್ದೇಶಕಿ ಪೂನಮ್ ಲಕ್ಷ್ಮೀಕಾಂತ ಕಟ್ಟೀಮನಿ ರಕ್ಷಾ ಬಂಧನ ವಿಷಯದ ಮೇಲೆ ಉಪನ್ಯಾಸ ನೀಡಿ, ರಕ್ಷಾ ಬಂಧನ ಅಣ್ಣ -ತಂಗಿಯ ನಡುವಿನ ಭಾವನಾತ್ಮಕ ಸಂಬAಧ ಕೊನೆಯವರೆಗೂ ಉಳಿಸಿಕೊಳ್ಳುವ ಬೆಸುಗೆಯಾಗಿದೆ. ಇಂತಹ ಅನೇಕ ಮಾನವೀಯ ಸಂಬAಧಗಳು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದರು.
ಶಿಕ್ಷಕಿ ಭಾಗ್ಯಜ್ಯೋತಿ ಭಗವಂತಗೌಡರ ಮಾತನಾಡಿದರು. ನಗರದ ಸ್ಪಂದನಾ ಆಸ್ಪತ್ರೆಯ ಎಂ.ಡಿ. ಡಾ. ಲಕ್ಷ್ಮೀಕಾಂತ ಮೇತ್ರಿ ಅಧ್ಯಕ್ಷತೆ ವಹಿಸಿದ್ದರು. ವಿಜಯಪೂರ ಜಿಲ್ಲೆಯ ಅಲೆಮಾರಿ ಸಮುದಾಯದ ಅಧ್ಯಕ್ಷ ಸಂಜೀವಕುಮಾರ ದಶವಂತ, ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ರಾಜ್ಯದ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ, ಡಾ. ರಾಜಶೇಖರ ಕೋಳೇಕರ, ರೇಷ್ಮೇ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲೇಶಪ್ಪ ಬಳಬಟ್ಟಿ, ಅನೀಲ ಏಳಗಿ, ಬಾಬು ಹಂಜಗಿ, ಅನಂತ ಜೈನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.
ಚಂದ್ರಕಾAತ ಉಪ್ಪಿನ ಪ್ರಸಾದ ಸೇವೆ ಮಾಡಿದ್ದರು. ಕಾರ್ಯಕ್ರಮದಲ್ಲಿ ೬೦ ವರ್ಷ ಪೂರೈಸಿದ ವೃದ್ದ ದಂಪತಿಗಳಾದ ನಿರ್ಮಲಾ ಮಲ್ಲೇಶಪ್ಪ ಬಳಬಟ್ಟಿ ಹಾಗೂ ಡಾ. ಪ್ರೀತಿ ಡಾ. ರಾಜಶೇಖರ ಕೋಳೇಕರ ಅವರಿಗೆ ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಬುರುಕುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಸಿ.ಹುಣಸಗಿ ನಿರೂಪಿಸಿದರು.
ಇಂಡಿ: ನಗರದ ಶಿರಶ್ಯಾಡ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ೫ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ೬೦ ವರ್ಷ ಪೂರೈಸಿದ ವೃದ್ದ ದಂಪತಿಗಳಾದ ನಿರ್ಮಲಾ ಮಲ್ಲೇಶಪ್ಪ ಬಳಬಟ್ಟಿ ಹಾಗೂ ಡಾ. ಪೀತಿ ಡಾ. ರಾಜಶೇಖರ ಕೋಳೇಕರ ಅವರಿಗೆ ಸನ್ಮಾನಿಸಲಾಯಿತು


















