ಬಿಜೆಪಿಯಿಂದ ಸತ್ಯಶೋಧನಾ ಸಮಿತಿ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ಕಾವೇರಿ ವನ್ಯಧಾಮದಲ್ಲಿ ಆ.15ರಂದು ನಡೆದ ಎನ್‌ಕೌಂಟರ್ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆಯಂತೆ ರಚಿಸಿರುವ ಸತ್ಯಶೋಧನಾ ಸಮಿತಿ ಬುಧವಾರ ಮೃತರ ಕುಟುಂಬಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಮಾಜಿ ಸಚಿವ ಎನ್. ಮಹೇಶ್ ಬಿಜೆಪಿ ಜಿಲ್ಲಾದ್ಯಕ್ಷನಿರಂಜನ್ ಕುಮಾರ್ ಒಬಿಸಿ ಘಟಕದ ಜಿಲ್ಲಾದ್ಯಕ್ವ ವೆಂಕಟೇಶ್ ನೇತೃತ್ವದ ತಂಡ ಮೃತರಾದ ಸಬಾಸ್ಟಿನ್ ಕುಮಾರ್, ಜಾನ್ ರೋಸ್ ಪೀಟರ್ ಹಾಗೂ ಅಂತೋಣಿ ಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿತು. ಬದುಕುಳಿದಿರುವ ಮಹಿಮಾ ದಾಸ್ ಅವರ ಮನೆಗೂ ತೆರಳಿ ಮಾಹಿತಿ ಪಡೆಯಿತು.
ಬಳಿಕ ಮಾದ್ಯಮಗಳ ಜೊತೆ ಅವರು ಮಾತನಾಡಿ
ಮೃತರು ಬೇಟೆಗಾರರಲ್ಲ, ರೈತರು ಹಾಗೂ ಪರಸ್ಪರ ಸಂಬಂಧಿಕರು ಎಂದು ಆರೋಪಿಸಿದ ಎನ್. ಮಹೇಶ್, ಪ್ರಕರಣದಲ್ಲಿ ನಕಲಿ ಎನ್‌ಕೌಂಟರ್ ನಡೆದಿರುವ ಅನುಮಾನಗಳಿದ್ದು, ಸಮಗ್ರ ತನಿಖೆ ಅಗತ್ಯವಿದೆ ಎಂದರು. ಪ್ರಮುಖ ಸಾಕ್ಷಿಯಾಗಿರುವ ಮಹಿಮಾ ದಾಸ್ ಅವರಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಿಮಾದಾಸ್‌ಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು: ಪ್ರಕರಣದ ನೈಜಾಂಶ ಹೊರಬರಲು ಮಹಿಮಾದಾಸ್‌ಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದಂತೆ ಅವರ ಹೇಳಿಕೆಯನ್ನು ದಾಖಲಿಸಬೇಕು . ವೈದ್ಯರಿಂದ ಫಿಟ್‌ನೆಸ್ ಪ್ರಮಾಣಪತ್ರ ಪಡೆದ ಬಳಿಕ ಮಹಿಮಾದಾಸ್ ಅವರನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರ್ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ ಎಂದು ಹೇಳಿದರು.
ನಂತರ ಬಿಜೆಪಿ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ಮಾತನಾಡಿ, ಈ ಘಟನೆಯಲ್ಲಿ ಮೃತಪಟ್ಟಕುಟುಂಬಸ್ಥರ ಪರ ಬಿಜೆಪಿ ಸದಾ ನಿಲ್ಲಲಿದೆ. ಯಾರೂ ಧೃತಿಗೆಡುವ ಅಗತ್ಯವಿಲ್ಲ. ಘಟನೆ ನಡೆದ ದಿನದಿಂದಲೂ ನಾವು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಕಷ್ಟವನ್ನು ಬಿಜೆಪಿ ವತಿಯಿಂದ ಸದನದಲ್ಲಿ ಧ್ವನಿಗೊಳಿಸಿ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇವೆ, ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಅಲ್ಪಸಂಖ್ಯಾತ ಘಟಕದ ರಾಜ್ಯದ್ಯಕ್ಷ ಡಾ ಅನಿಲ್ ಥಾಮಸ್ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.
















