ಇಂಡಿಯಲ್ಲಿ ರೈತರ ಹೋರಾಟಕ್ಕೆ ಬಿಗ್ ಟ್ವಿಸ್ಟ್..!
ಇಂಡಿ : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಬಳಿ ನಡೆಯುತ್ತಿದ್ದ ರೈತರ ಧರಣಿ ಸತ್ಯಾಗ್ರಹ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ..!
ಧರಣಿಗೆ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಹಾಗೂ ಚಂದಪ್ಪ ಜೇಟ್ಟೆಪ್ಪ ಮಿರಗಿ ಅವರು ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ..!
ಇಂಡಿ–ಚಡಚಣ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು..! ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಆರಂಭಿಸಬೇಕು..! ಇವೇ ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ರೈತರು ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ್ದಾರೆ..!
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದೇ ಆಮರಣ ಉಪವಾಸ ಆರಂಭಿಸಿರುವ ಗುರುನಾಥ ಬಗಲಿ,ತಮ್ಮ ಬೇಡಿಕೆ ಈಡೇರುವವರೆಗೆ ಆಹಾರ ಸೇವಿಸದೆ ಉಪವಾಸ ಮುಂದುವರಿಸುವುದಾಗಿ ಹೇಳಿದ್ದಾರೆ..!
ರೈತರ ಧರಣಿಗೆ ಸ್ಪಂದನೆ ಸಿಗುತ್ತಾ..? ಸರ್ಕಾರ ರೈತರ ಬೇಡಿಕೆಗೆ ಮಣಿಯುತ್ತಾ..? ಆಮರಣ ಉಪವಾಸಕ್ಕೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ..?
ಇದೀಗ ಇಂಡಿಯಲ್ಲಿ ರೈತರ ಹೋರಾಟ ಕೈಮೀರಿದ ಹಂತಕ್ಕೆ ತಲುಪಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ..!
“ಅಬ್ಬಾ..! ಇಂಡಿಯಲ್ಲಿ ರೈತರ ಹೋರಾಟಕ್ಕೆ ಬಿಗ್ ಟ್ವಿಸ್ಟ್..! ಆಮರಣ ಉಪವಾಸಕ್ಕೆ ಕುಳಿತ ರೈತರು..!”



















