ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವ
ಇಂಡಿ: ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಖಾಜು ಸಿಂಗೆಗೋಳ ಹಾಗೂ ನಿವ್ರುತ್ತ ಶಿಕ್ಷಕ ಆರ್.ಬಿ. ಪಾಟೀಲ ಅವರನ್ನು ಇಂಡಿ ತಾಲೂಕು ಪತ್ರಕರ್ತರ ಬಳಗದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಎ.ಸಿ. ಪಾಟೀಲ, ಕನ್ನಡ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪತ್ರಕರ್ತ ಖಾಜು ಸಿಂಗೆಗೋಳ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿರುವುದು ಸಂತೋಷದ ಸಂಗತಿಯಾಗಿದೆ. ಅವರ ಪತ್ರಿಕಾ ಸೇವೆ ಹಾಗೂ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದರು. ವರದಿಗಾರ ಉಮೇಶ ಕೊಳೇಕರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರೇಬೇವನೂರ ಗ್ರಾಮದ ಶಿಕ್ಷಕ ಆರ್.ಬಿ. ಪಾಟೀಲ ಅವರಿಗೆ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಶಿಕ್ಷಕ ದಶರಥ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತರಿಗೆ ಪತ್ರಕರ್ತರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇವನೂರ, ಶಂಕರ ಜಮಾದಾರ, ಸಚಿನ ಇಂಡಿ, ತುಕಾರಾಮ ಪವಾರ, ಅರವಿಂದ ಕಾಂಬಳೆ, ಅಲ್ಲಾಬಕ್ಷ ಗೋರೆ, ಕಾಶಿನಾಥ ಕ್ಷೇತ್ರಿ, ಫಯಾಜ್ ಬಾಗವಾನ, ಮಲ್ಲಿಕಾರ್ಜುನ ಹಾವಿನಾಳಮಠ, ಮಹೇಶ ಶಿವಶರಣ, ರಾಮು ಯಂಕಂಚಿ, ಸಿದ್ದು ಕೋಷ್ಠಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಪತ್ರಿಕಾ ಬಳಗದ ವತಿಯಿಂದ ಸತ್ಕರಿಸಲಾಯಿತು.
















