ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’
ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ
ಇಂಡಿ : “ನವಣೆಯು ಪೌಷ್ಟಿಕಾಂಶ ಭರಿತ ಪ್ರಮುಖ ಸಿರಿಧಾನ್ಯ ಬೆಳೆಯಾಗಿದೆ. ಇದರಲ್ಲಿ ಸತು ಮತ್ತುಕಬ್ಬಿಣದ ಅಂಶ ಹೇರಳವಾಗಿದ್ದು, ನವಣೆಯಿಂದ ತಯಾರಿಸಿದ ಆಹಾರ ಧಾನ್ಯಗಳ ಸೇವನೆಯುಆರೋಗ್ಯ ವೃದ್ಧಿಗೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲುಅತ್ಯಂತ ಸಹಕಾರಿಯಾಗಿದೆ,” ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ (ವಿಜಯಪುರ) ಸಹ ವಿಸ್ತರಣಾ ನಿರ್ದೇಶಕರಾದಡಾ. ರಾಜಕುಮಾರ ಬಿ. ಜೊಳ್ಳಿ ಹೇಳಿದರು.
ಕೃಷಿ ವಿಜ್ಞಾನಕೇಂದ್ರದಿAದ ತಾಲೂಕಿನ ಅಹಿರಸಂಗಗ್ರಾಮದ ಪ್ರಗತಿಪರರೈತ ಸುರೇಶ ಬ್ಯಾಗಳ್ಳಿ ಜಮೀನಿನಲ್ಲಿ ನಡೆದ ನವಣೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆ.ವಿ.ಕೆ. ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಮಾತನಾಡಿ ಮಾನವನಆರೋಗ್ಯರಕ್ಷಣೆಯಲ್ಲಿ ಸಿರಿಧಾನ್ಯಗಳ ಪಾತ್ರಅಪಾರವಾಗಿದ್ದು, ರೈತರುತಮ್ಮಆಹಾರ ಪದ್ಧತಿಯಲ್ಲಿ ಇವುಗಳನ್ನು ಬಳಸುವುದರ ಜೊತೆಗೆ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲು ಮುಂದಾಗಬೇಕು. ಅಲ್ಲದೆ, ಪ್ರಸ್ತುತ ಹವಾಮಾನ ವೈಪರೀತ್ಯ ಹಾಗೂ ಅಭಾವ ಪರಿಸ್ಥಿತಿಯಲ್ಲಿ ಕಡಿಮೆ ನೀರಿನಲ್ಲಿಉತ್ತಮ ಇಳುವರಿ ನೀಡುವ ನವಣೆಯು ಬರಗಾಲಕ್ಕೆ ಸೂಕ್ತವಾದ ಬೆಳೆಯಾಗಿದೆ,” ಎಂದರು.
ಡಾ. ಪ್ರಕಾಶ ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಇದುಅತ್ಯುತ್ತಮ ಬರ ನಿರೋಧಕ ತಳಿಯಾಗಿದ್ದು, ಬೆಂಕಿ ರೋಗಕ್ಕೆ ಮಧ್ಯಮ ನಿರೋಧಕ ಶಕ್ತಿ ಹೊಂದಿದೆ. ಕಡಿಮೆ ಮಳೆಯಾಗುವ ಹಾಗೂ ಅಭಾವ ಪೀಡಿತ ಪ್ರದೇಶಗಳಿಗೆ ಇದುಅತ್ಯಂತ ಸೂಕ್ತವಾದಕಿರುಧಾನ್ಯ ತಳಿಯಾಗಿದೆ” ಎಂದು ವಿವರಿಸಿದರು.
ಡಾ. ಹೀನಾ ಎಂ. ಎಸ್. ಡಾ. ಪ್ರೇಮ್ ಚಂದ್ ಯು. ಡಾ. ವೀಣಾಚಂದಾವರಿ ಮಾತನಾಡಿದರು.
ಕಾರ್ಯಕ್ರಮದಲ್ಲಿಅಹಿರಸಂಗಗ್ರಾಮದ ಪ್ರಗತಿಪರರೈತರಾದ ಸುರೇಶ ಬ್ಯಾಗಳ್ಳಿ, ಸಿದ್ರಾಮಪ್ಪ ವಳಸಂಗ, ಮುತ್ತು ಬ್ಯಾಗಳ್ಳಿ, ಅಪ್ಪು ಪೂಜಾರಿ ಹಾಗೂ ರಾಜಕುಮಾರತೇಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ವಿಜ್ಞಾನಿಗಳು ಹಾಗೂ ರೈತರು ನವಣೆ ಬೆಳೆದ ಕ್ಷೇತ್ರಕ್ಕೆ ನೇರವಾಗಿ ಭೇಟಿ ನೀಡಿ ಬೆಳೆಯ ಬೆಳವಣಿಗೆ, ಇಳುವರಿ ಹಾಗೂ ತಂತ್ರಜ್ಞಾನ ನಿರ್ವಹಣೆಯಕುರಿತು ಸಮಾಲೋಚನೆ ನಡೆಸಿದರು. ಈ ಕ್ಷೇತ್ರೋತ್ಸದಲ್ಲಿಅಹಿರಸಂಗ ಹಾಗೂ ಇದರಸುತ್ತಮುತ್ತಲಿನ ಗ್ರಾಮದ೭೦ಕ್ಕೂ ಹೆಚ್ಚು ಭಾಗವಹಿಸಿ ರೈತರುಕ್ಷೇತ್ರೋತ್ಸವದಸದುಪಯೋಗವನ್ನುಪಡೆದುಕೊಂಡರು.
ಕೃಷಿ ವಿಜ್ಞಾನಕೇಂದ್ರ ಇಂಡಿವತಿಯಿAದ ತಾಲೂಕಿನ ಅಹಿರಸಂಗಗ್ರಾಮದ ಪ್ರಗತಿಪರರೈತ ಸುರೇಶ ಬ್ಯಾಗಳ್ಳಿ ಅವರಜಮೀನಿನಲ್ಲಿ ‘ನವಣೆ ಬೆಳೆಯ ಕ್ಷೇತ್ರೋತ್ಸವ’ ಕಾರ್ಯಕ್ರಮದಲ್ಲಿ ರಾಜಕುಮಾರ ಜೊಳ್ಳಿ ಮಾತನಾಡಿದರು.



















