ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ
ಇಂಡಿ: ಪ್ರಾಥಮಿಕ ಶಾಲಾ ಶಿಕ್ಷಕರು ಒಟ್ಟಾಗಿ ಸೇರಿ ತಮ್ಮ ಅರ್ಥಿಕ ಮತ್ತು ವೃತ್ತಿಪರ ಹಿತಾಶಕ್ತಿಗಳನ್ನು ಕಾಯ್ದುಕೊಳ್ಳಲು ಸ್ಥಾಪಿಸಿಕೊಂಡಿರುವ ಸಂಘ ಶಿಕ್ಷಕರಿಗೆ ತುರ್ತು ಸಮಯದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಸರಕಾರಿ ಪ್ರಾಥಮಿಕ ಶಾಲಾ ಸಹಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ ಹೇಳಿದರು.
ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ ೧೦೬ ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಪಿ.ಜಿ.ಕಲ್ಮನಿ ಮಾತನಾಡಿ ಶಿಕ್ಷಕರಲ್ಲಿ ಉಳಿತಾಯ ಮನೋಭಾವನೆ ಬೆಳೆಯುತ್ತದೆ.ಶಿಕ್ಷಕರ ಅರ್ಥಿಕ ಸಾಮಾಜಿಕ ಮತ್ತು ವೃತ್ತಿಪರ ಹಿತಾಶಕ್ತಿ ಕಾಯಲು ಹಾಗೂ ಅವರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾದ ಸಂಘ ಎಂದರು.
ವಿಜಯಪುರ ಜಿಲ್ಲಾ ಜಿಒಸಿಸಿ ಬ್ಯಾಂಕಿನ ಅಲ್ಲಾಬಕ್ಷ ವಾಲಿಕಾರ, ನಿಕಟಪೂರ್ವ ಅಧ್ಯಕ್ಷ ವೈ.ಟಿ.ಪಾಟೀಲ,ಬಿ.ಎಂ.ವಠಾರ, ಜಯರಾಮ ಚವ್ಹಾಣ, ಸಿ.ಎಸ್.ಮೇತ್ರಿ ಮಾತನಾಡಿದರು.
ಪಿ.ಎಸ್.ಚಾಂದಕವಟೆ, ಎಸ್,ಸಿ,ಗಿಡಗಂಟಿ, ಅಲ್ತಾಫ ಬೋರಾಮಣಿ, ಅಬುತಾಲಿಬಿ ಹೋಸುರ, ಸಿದ್ದು ಅರಳಗುಂಡಗಿ, ಎಚ್.ಎಂ.ಮುಜಾವರ, ಕಾಂತು ಇಂಡಿಮೋಹನ ಕಟಕದೊಂಡ ಶಾರುಬಾಯಿ ಗಿರಣಿ ಶ್ರೀಮತಿ ಜೆ.ಎಚ್ ತೆಲಗ, ವಿಜಯಲಕ್ಷಿö್ಮÃ ಡಿಸಲೆ ಶಾಹಿನ್ ಅಂಜಮ, ಪಾರ್ವತಿ ತಳವಾರ, ಜಿಎಸ್. ನಿಂಬಾಳ, ಡಿ.ಎಸ್.ಕಾಮತ, ಎಂ.ಎA.ನೆದಲಗಿ, ಎಸ್.ಡಿ ಪಾಟೀಲ, ಪಿ.ಐ ಗೋರನಾಳ, ಐ.ಜೆ.ತಳವಾರ, ಎಂ.ಡಿ.ಕAಠಿಕಾರ, ಟಿ ಕೆ. ಪೂಜಾರಿ, ಕಾರ್ಯದರ್ಶಿ ಎಸ್.ಎಸ್.ನರೋಟಿ, ಸುರೇಶ ಪಾಟೀಲ, ಆನಂದ ಕೆಂಬಾವಿ ಮತ್ತಿತರಿದ್ದರು.
ಇಂಡಿ ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ ೧೦೬ ನೇ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಹರಳಯ್ಯ ಮಾತನಾಡಿದರು.



















