ಇಂಡಿಯಲ್ಲಿ ಜೋಡೆತ್ತು ಉಳಿಸಲು ರೈತರ ಹಕ್ಕೋತ್ತಾಯ..!
ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..!
ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!
ರಾಜ್ಯ ಬಜೆಟ್ನಲ್ಲಿ ಜೋಡೆತ್ತಿನ ರೈತರಿಗೆ 10% ಮೀಸಲಾತಿಗೆ ಒತ್ತಾಯ..!
ನಗರದಲ್ಲಿ ಜೋಡೆತ್ತಿನ ರೈತರ ಹಕ್ಕೋತ್ತಾಯದ ಕೂಗು ಮೊಳಗಿದೆ. ವಿವಿಧ ಗ್ರಾಮಗಳಿಂದ 120ಕ್ಕೂ ಹೆಚ್ಚು ಜೋಡೆತ್ತಿನ ರೈತರು, ತಮ್ಮ ಜೋಡೆತ್ತಿನ ಬಂಡಿಗಳೊಂದಿಗೆ ಪಟ್ಟಣಕ್ಕೆ ಆಗಮಿಸಿ ಮೆರವಣಿಗೆ ನಡೆಸಿದರು.
ಅಥರ್ಗಾ, ಬೆನಕನಳ್ಳಿ, ಶಿರಕನಳ್ಳಿ, ತಡವಲಗಾ ಹಾಗೂ ಬೋಳೆಗಾಂವ ಸೇರಿದಂತೆ ವಿವಿಧ ಗ್ರಾಮಗಳ ರೈತರು ಸೇವಾಲಾಲ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಜೋಡೆತ್ತಿನ ಬಂಡಿಗಳೊಂದಿಗೆ ಮೆರವಣಿಗೆ ನಡೆಸಿದರು.
ನಂತರ ಸೇವಾಲಾಲ ವೃತ್ತದಲ್ಲಿ ಜಮಾಯಿಸಿದ ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.
ರೈತ ಮುಖಂಡ ಗಣಪತಿ ಬಾಣಿಕೋಲ ಹೇಳಿಕೆ
ಜೋಡೆತ್ತಿನ ಕೃಷಿಕರಿಂದಲೇ ಗ್ರಾಮೀಣ ಕೃಷಿ ಸಂಸ್ಕೃತಿ ಉಳಿಯಲು ಸಾಧ್ಯ.ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ನಾಶವಾದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಾಗಬಹುದು ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.ಕಳೆದ ಮೂರು ವರ್ಷಗಳಿಂದ ಜೋಡೆತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ನಂದಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
🔴 ಪ್ರಮುಖ ಬೇಡಿಕೆಗಳು
ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹಧನ ನೀಡಬೇಕು..!
ರಾಜ್ಯ ಬಜೆಟ್ನಲ್ಲಿ ಜೋಡೆತ್ತಿನ ರೈತರಿಗೆ ಶೇ.10ರಷ್ಟು ಅನುದಾನ ಮೀಸಲಿಡಬೇಕು..!
ಜೋಡೆತ್ತು ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಒಟ್ಟಿನಲ್ಲಿ, ಜೋಡೆತ್ತು ಉಳಿಸಿ, ಗ್ರಾಮೀಣ ಕೃಷಿ ಸಂಸ್ಕೃತಿ ಉಳಿಸಿ ಎಂಬ ಸಂದೇಶದೊಂದಿಗೆ ಇಂಡಿಯಲ್ಲಿ ರೈತರು ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಇದೀಗ ರೈತರ ಈ ಹಕ್ಕೋತ್ತಾಯಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಜೋಡೆತ್ತಿನ ಬಂಡಿಗಳೊಂದಿಗೆ ರೈತರ ಮೆರವಣಿಗೆ..!
ಇಂಡಿಯಲ್ಲಿ 120ಕ್ಕೂ ಹೆಚ್ಚು ರೈತರಿಂದ ಹಕ್ಕೋತ್ತಾಯ..!
ಜೋಡೆತ್ತಿನ ರೈತರಿಗೆ ₹11 ಸಾವಿರ ಮಾಸಿಕ ಪ್ರೋತ್ಸಾಹಧನಕ್ಕೆ ಆಗ್ರಹ..! ಬಜೆಟ್ನಲ್ಲಿ ಶೇ.10ರಷ್ಟು ಅನುದಾನಕ್ಕೆ ಒತ್ತಾಯ..!
ನಂದಿ ಸಂಸ್ಕೃತಿ ಉಳಿಸಲು ಸರ್ಕಾರಕ್ಕೆ ಮನವಿ..!










