ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ. ಪಾಟೀಲ್ ಜನ್ಮದಿನ
ಅಫಜಲಪುರ: ಸಮಾಜವಾದಿ ಪಕ್ಷದ ಮುಖಂಡ ಆರ್.ಡಿ. ಪಾಟೀಲ್ ಅವರ 43ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಹಾಗೂ ಬಾಣತಿ ತಾಯೆಂದರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಅಶೋಕ್ ದುದ್ದಗಿ, “ಜನಪರ ನಾಯಕ ಆರ್.ಡಿ. ಪಾಟೀಲ್ ಅವರ ಜನ್ಮದಿನವನ್ನು ಸಮಾಜಮುಖಿ ಸೇವೆಯ ಮೂಲಕ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹೊಂದಿ ಜನಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವಂತಾಗಲಿ” ಎಂದು ಶುಭ ಹಾರೈಸಿದರು.
ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕುಪ್ಪಣ್ಣ ಕಲ್ಲೂರ, ಬಸವರಾಜ ಸಾಗನೂರ, ಅಶೋಕ್ ದುದ್ದಗಿ, ಈರಣ್ಣ ಕುಂಬಾರ, ಭೀಮರಾಯ ಕಲಶೆಟ್ಟಿ, ಸುನಿಲ್ ಬಳೂರಗಿ, ರಾಜು ನಿಂಬಾಳ, ಗುರುನಾಥ ನಿಂಗದಳ್ಳಿ, ಪುಟ್ಟು ಹೂಗಾರ, ರವಿ ಉಕ್ಕಲಿ, ಶರಣಯ್ಯ ನಂದಿಕೋಲ, ರಾಜು ದೇವಣಗಾಂವ, ರಾಜು ಪೂಜಾರಿ, ಗುರುದೇವ ಪೂಜಾರಿ ಸೇರಿದಂತೆ ಸಮಾಜವಾದಿ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
.