ಇಂಡಿ | ಸೆ. ೧೨ ರಂದುಪ್ರಜಾಸೇವಾ ಅಂದೋಲನ ಕಾರ್ಯಕ್ರಮ
ಇಂಡಿ : ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಸೆ. ೧೨ ರಂದು ಅಥರ್ಗಾ ಗ್ರಾಮದ ಗ್ರಾ.ಪಂ ಕಾರ್ಯಾಲಯದ ಸಬಾಭವನದಲ್ಲಿ ಪ್ರಜಾ ಸೇವಾ ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ತಿಳಿಸಿದ್ದಾರೆ.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಸಭೆಯ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕರು ತಮ್ಮ ಆಧಾರ ಕಾರ್ಡ ಪಡಿತರ ಚೀಟಿಹಾಗೂ ಚುನಾವಣೆ ಗುರುತಿನ ಚೀಟಿ ನಕಲು ಪ್ರತಿಗಳೋಂದಿಗೆ ಆಗಮಿಸಿ ನಿಗದಿತ ಅರ್ಜಿ ನಮೂನೆಯಲ್ಲಿ ಮನವಿ ಸಲ್ಲಿಸಿ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರರು ತಿಳಿಸಿದ್ದಾರೆ.
ಗೃಹಜ್ಯೋತಿ, ಗೃಹಲಕ್ಷಿö್ಮÃ ಶಕ್ತಿ ಅನ್ನಭಾಗ್ಯ ಯುವನಿಧಿ ಸೇರಿದಂತೆ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಇರುವ ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬಹುದಾಗಿದೆ. ವಸತಿ ಯೋಜನೆ ನಿವೇಶನ ಹಾಗೂ ಮನೆ ಹಂಚಿಕೆ ಹೊಸ ಪಡಿತರ ಚೀಟಿ ಹಾಗೂ ಇತರೆ ಅಭಿವೃದ್ದಿಗೆ ಸಂಬAದಿಸಿದ ಕುಂದು ಕೊರತೆಗಳನ್ನು ಸಭೆಯಲ್ಲಿ ಸಲ್ಲಿಸಬಹುದು ಎಂದು ತಹಸೀಲ್ದಾರರು ತಿಳಿಸಿದ್ದಾರೆ.
ಫೋಟೋ- ೧೦ ಇಂಡಿ ೦೩ ತಹಸೀಲ್ದಾರ ಕೋಳಶೆಟ್ಟಿ



















