Tag: #ಶಕ್ತಿ ಯೋಜನೆ ಸಕಾರ : ಪ್ರಶಸ್ತಿ ಪುರಸ್ಕಾರ

ಗ್ಯಾರೆಂಟಿ ಯೋಜನೆಗೆ ಪ್ರಶಸ್ತಿ ಪುರಸ್ಕಾರ..! ಅದು ಯಾವುದು ಗೊತ್ತಾ..?

ಶಕ್ತಿ ಯೋಜನೆ ಸಕಾರ : ಪ್ರಶಸ್ತಿ ಪುರಸ್ಕಾರ Voice Of Janata: Editor : ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರೆಂಟಿ ಯೋಜನೆಗಳಲ್ಲೊಂದಾದ 'ಶಕ್ತಿ' ಸಾಕಾರಗೊಂಡ ಹಿನ್ನೆಲೆಯಲ್ಲಿ ...

Read more
  • Trending
  • Comments
  • Latest
ಕೇಂದ್ರ ಸಚಿವ ಜೋಶಿ ಹಾಗೂ ಸಂಸದೆ ಕಂಗನಾ ರಣಾವತ್ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ.   ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಫಜಲಪುರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಫಜಲಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯಡಿ ರೈತರು ಪ್ರೀಮಿಯಂ ಪಾವತಿಸಿದ್ದರೂ, ಹಲವಾರು ರೈತರ ಖಾತೆಗಳಿಗೆ ಕೇವಲ ₹17, ₹20ರಷ್ಟು ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.  ಈ ಅನ್ಯಾಯದ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.  ಪ್ರತಿಭಟನೆಯಲ್ಲಿ ರಮೇಶ ಪಾಟೀಲ್, ಗುರು ಚಾಂದಕವಟೆ, ಬಸವರಾಜ ಪಾಟೀಲ್, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ, ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಜೀವನದ ನೆನಪುಗಳಿಗೆ ಸಾಕ್ಷಿಯಾದ  ಸ್ನೇಹ ಸಮ್ಮಿಲನ