ಸಬ್ ರಿಜಿಸ್ಟರ್ ಅಧಿಕಾರಿ ಅಂಜಲಿ ಸಿ ವರ್ಗಾವಣೆಗೆ ಸರಕಾರಕ್ಕೆ ಪತ್ರ ಬರೆದ ಶಾಸಕ ಪಾಟೀಲ
ಇಂಡಿ: ನಗರದ ಉಪನೋಂದಣಾಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿಲ್ಲ ಎಂದು ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿದ್ದು ಹಾಗೂ ಸಾರ್ವಜನಿಕರಿಂದ ಸಾಕಷ್ಟು ಮೌಖಿಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂಡಿ ಉಪನೋಂದಣಾಧಿಕಾರಿ ಅಂಜಲಿ ಸಿ ಅವರನ್ನು ಬೇರೆಕಡೆಗೆ ವರ್ಗಾವಣೆ ಮಾಡುವಂತೆ ಶಾಸಕರಾದ ಯಶವಂತ್ರಾಯಗೌಡ ಪಾಟೀಲ ಅವರು ಕಂದಾಯ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೀರಾವರಿ ಜಮೀನಿಗೆ ಒಣ ಬೇಶಾಯದ ಮೌಲ್ಯದಲ್ಲಿ ಖರೀದಿ ಮಾಡಿ ಕೊಡಲಾಗುತ್ತಿದೆ ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.
ವರದಿಗಳು ಪ್ರಕಟವಾಗುತ್ತಿದ್ದರೂ ಸಹ ಉಪನೋಂದಣಾಧಿಕಾರಿಗಳು ಮತ್ತದೇ ತಪ್ಪನ್ನು ಪದೇ-ಪದೇ ಮಾಡುತ್ತಿದ್ದಾರೆ. ಸರಣಿ ವರದಿ ಪ್ರಕಟಗೊಂಡ ನಂತರವೂ ನೀರಾವರಿ ಜಮೀನಿಗೆ ಒಣಬೇಸಾಯದ ಮೌಲ್ಯದಲ್ಲಿ ಖರೀದಿ ಮಾಡಿ ಕೊಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತರಿಂದ ದೂರು ಸಲ್ಲಿಕೆ: ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೀರಾವರಿ ಜಮೀನಿಗೆ ಒಣಬೇಸಾಯದ ಮೌಲ್ಯದಲ್ಲಿ ಖರೀದಿ ಮಾಡಿಕೊಟ್ಟ ದಾಖಲಾತಿಗಳೊಂದಿಗೆ ನಗರದ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಹಾವಿನಾಳಮಠ ಅವರು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ನೀರಾವರಿ ಇರುವ ಪಹಣಿಗಳು, ನೀರಾವರಿ ಮೌಲ್ಯ ಬಿಟ್ಟು ಒಣಬೇಸಾಯ ಮೌಲ್ಯದಲ್ಲಿ ಖರೀದಿ ಮಾಡಿಕೊಟ್ಟ ಖರೀದಿ ಪತ್ರಗಳನ್ನು ಲಗತ್ತಿಸಿ ವಿಜಯಪೂರದ ಜಿಲ್ಲಾ ನೋಂದಣಾಧಿಕಾರಿ ದ್ರಾಕ್ಷಾಯಿಣಿ ಮಠ ಅವರಿಗೆ ದೂರು ಸಲ್ಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಇಷ್ಟಾದರೂ ಉಪನೋಂದಣಾಧಿಕಾರಿಗಳು ತಮ್ಮದೇ ಸರಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂಬುವAತೆಯೇ ಮಾತನಾಡುತ್ತಲೇ ತಮ್ಮ ಹಳೇಚಾಳಿ ನೀರಾವರಿ ಜಮೀನುಗಳಿಗೆ ಒಣಬೇಸಾಯದ ಮೌಲ್ಯದಲ್ಲಿ ಖರೀದಿ ಮಾಡುತ್ತಲೇ ಇದ್ದಾರೆ.
ಇಂಡಿ: ಶಾಸಕ ಯಶವಂತ್ರಾಯಗೌಡ ಪಾಟೀಲರು ಸರಕಾರದ ಅಪರ ಮುಖ್ಯಕಾರ್ಯದರ್ಶಿಗಳಿಗೆ ಬರೆದ ಪತ್ರದ ಪ್ರತಿ.

ಇಂಡಿ: ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಹಾವಿನಾಳಮಠ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.

multi-frame: 1;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;


















