ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!
ಹಳೆಯ ವಿದ್ಯುತ್ ಕಂಬ ಬಿದ್ದು 24 ದಿನಗಳ ಗತಿಸಿವೆ. ಕಂಬ ದುರಸ್ಥಿ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾದ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನಕ್ಕೆ ಜನರು ರೋಷಿ ಹೋಗಿದ್ದಾರೆ. ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ನಾಗರಹಾಳ ಗ್ರಾಮದ 1 ನೇ ವಾರ್ಡಿನ 45 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಜನರು ಹೈರಾಣಾಗಿದ್ದಾರೆ. ಕಳೆದ 24 ದಿನಗಳಿಂದ ಹಳೆಯ ವಿದ್ಯುತ್ ಕಂಬ ಒಂದು ಮಳೆಗೆ ಬಿದ್ದಿತ್ತು. ಬಿದ್ದ ಸ್ಥಳದಲ್ಲೇ ವಿದ್ಯುತ್ ಕಂಬವನ್ನು ದುರಸ್ಥಿಗೊಳಿಸಿ ವಾರ್ಡಿನ ನಿವಾಸಿಗಳಿಗೆ ಅನುಕೂಲ ಮಾಡಿ ಅಂತಾ ಹಲವಾರು ಬಾರಿ ಜೆಸ್ಕಾಂ ಎ ಇ ಇ ಹಾಗೂ ಜೆ ಇ ಗೆ ಮನವಿ ಮಾಡಲಾಗಿತ್ತು. ಸ್ಥಳೀಯರ ಮನವಿಗೆ ಕಿವಿಗೋಡದ ಅಧಿಕಾರಿಗಳು ಲೇಬರ್ ಸಿಕ್ತಿಲ್ಲ. ಲೇಬರ್ ಸಿಕ್ಕ ಮೇಲೆ ಕಂಬ ದುರಸ್ಥಿ ಮಾಡುತ್ತೇವೆ ಅಂತಾ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸದ್ಯ ಮೊಹರಂ ಹಬ್ಬ ಹಿನ್ನಲೆಯಲ್ಲಿ ಆಲಂಗಳ ದರ್ಶನಕ್ಕೂ ವಿದ್ಯುತ್ ಶಾಕ್ ಎದುರಾಗಿದೆ. ಸದ್ಯ 40 ಮನೆಗಳಿಗೆ ಪರ್ಯಾಯ ವಿದ್ಯುತ್ ವ್ಯವಸ್ಥೆ ಕಲ್ಪಿಸಿರುವ ಜೆಸ್ಕಾಂ ಇಲಾಖೆ ಕಂಬ ದುರಸ್ಥಿಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಹೋ ರಾತ್ರಿ ಧರಣಿ ನೆಡೆಸುವ ಎಚ್ಚರಿಕೆ ನೀಡಿದ್ದಾರೆ.


















