ಲಚ್ಯಾಣ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂದು ಲಕ್ಷ ಬಿಲ್ವಾರ್ಚನೆ ಮಹೋತ್ಸವ | ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಇಂಡಿ: ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಲಚ್ಯಾಣ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಆಗಸ್ಟ್ ೯, ೨೦೨೬ ರವಿವಾರದಂದು ಬೆಳಿಗ್ಗೆ ೧೦:೦೦ ಗಂಟೆಗೆ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ಕರ್ತೃ ಗದ್ದುಗೆಗೆ ವಿಶೇಷ ಮಹಾಪೂಜೆ ಹಾಗೂ ಲಕ್ಷ ಬಿಲ್ವಾರ್ಚನೆ ಮಹೋತ್ಸವ ಜರುಗಲಿದೆ.
ಶ್ರೀಗಳ ದಿವ್ಯ ಸಾನಿಧ್ಯ ದಿವ್ಯ ಶಕ್ತಿಯ ಭವ್ಯ ಪರಂಪರೆಯAತೆ ಸಾಗುತ್ತಿರುವ ಈ ಮಹೋತ್ಸವವು ಪೂಜ್ಯ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.
ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಲಕ್ಷ ಬಿಲ್ವಾರ್ಚನೆಯ ಜೊತೆಜೊತೆಗೆ ಸಮಾಜದ ಕಲ್ಯಾಣ ಹಾಗೂ ಸೌಭಾಗ್ಯ ವೃದ್ಧಿಗಾಗಿ ಸಹಸ್ರಾರು ಮುತ್ತೈದೆಯರ ಉಡಿ ತುಂಬುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಭಾಗದ ನೂರಾರು ಹಳ್ಳಿಗಳಿಂದ ಮಹಿಳೆಯರು ಮತ್ತು ಸದ್ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಧರ್ಮಸಭೆ, ಭಜನೆ, ಧಾರ್ಮಿಕ ಪ್ರವಚನ ಹಾಗೂ ಮಹಾಪ್ರಸಾದ ವ್ಯವಸ್ಥೆಯು ಈ ಸಂದರ್ಭದಲ್ಲಿ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಲಚ್ಯಾಣ ಭಕ್ತರು ಮನವಿ ಮಾಡಿದ್ದಾರೆ.

















