ಭೀಮಾತೀರದಲ್ಲಿ ಗಾಂಜಾ ಸಾಗಾಟ, ಜೆ ಎಮ್ ಎಪ್ ಸಿ ಕೋರ್ಟ್ ಇಬ್ಬರಿಗೆ ಶಿಕ್ಷೆ ಪ್ರಕಟ. ಏನು ಗೊತ್ತಾ..?
ಇಂಡಿ : ಗಾಂಜಾ ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಇಂಡಿ ಜೆಎಂಎಫ್ಸಿ ನ್ಯಾಯಾಲಯದಿಂದ 6 ತಿಂಗಳು ಶಿಕ್ಷೆ ಹಾಗೂ ಇಬ್ಬರಿಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಯಲ್ಲಪ್ಪ ಮೂಲಿಮನಿ, ಕೆಂಚಪ್ಪ ಮೂಲಿಮನಿ ಶಿಕ್ಷೆಗೊಳಗಾದವರು. ಸರ್ಕಾರದ ಪರವಾನಗಿ ಪಡೆಯದೇ ಅಕ್ರಮವಾಗಿ ಇಬ್ಬರು 950 ಗ್ರಾಂ ಗಾಂಜಾ ಬಿಳಿ ಬಣ್ಣದ ಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿಗೈದಿದ್ದರು. ಈ ಕುರಿತು ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ 24-09-2021ರಲ್ಲಿ ಕೇಸ್ ದಾಖಲು ಆಗಿದೆ. ಇನ್ನು ಅಬಕಾರಿ ಉಪ ನಿರೀಕ್ಷಕರಾದ ಎಂ.ಎಚ್. ಪಡಸಲಗಿ ತನಿಖೆ ಕೈಗೊಂಡು ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಈಶ್ವರ ಎಸ್.ಎಂ ಅವರು, ವಾದ ವಿವಾದಗಳನ್ನು ಆಲಿಸಿ ಆರೋಪಿಗಳ ಮೇಲಿನ ಆರೋಪ ರುಜುವಾತಾಗಿದೆ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಇಬ್ರಾಹಿಂ ಗಚ್ಚಿನಮಾಲ್ ವಾದ ಮಂಡಿಸಿದ್ದಾರೆ.


















