ಧರಣಿ ವೇದಿಕೆಯಲ್ಲಿ ಪ್ರಗತಿಪರ ರೈತ ಮಹ್ಮದ ಸಾಬ್ ಹಳ್ಯಾಳರಿಗೆ ಸನ್ಮಾನ; ರೈತ ಹೋರಾಟಕ್ಕೆ ₹5 ಸಾವಿರ ದೇಣಿಗೆ
ಅಫಜಲಪುರ: ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಭೀಮಾ ನದಿಗೆ ನೀರು ಬಿಡುಗಡೆ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಅನಿರ್ದಿಷ್ಟ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ಅಫಜಲಪುರ ಪಟ್ಟಣದ ಪ್ರಗತಿಪರ ರೈತ ಮಹ್ಮದ ಸಾಬ್ ಹಳ್ಯಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು, ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರುವ ಹಾಗೂ ಕೃಷಿಯಲ್ಲಿ ಮಾದರಿಯಾಗಿರುವ ರೈತರನ್ನು ಗೌರವಿಸುವುದು ಇತರ ರೈತರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ವಿಶೇಷವೆಂದರೆ, ಮಹ್ಮದ ಸಾಬ್ ಹಳ್ಯಾಳ ಅವರು ಪ್ರತಿ ವರ್ಷ ಸುಮಾರು 80 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದು ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಕೃಷಿಯೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ಅವರು, ಧರಣಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಯಂಪ್ರೇರಿತವಾಗಿ ₹5,000 ದೇಣಿಗೆ ನೀಡಿ ಹೋರಾಟಗಾರರ ಮೆಚ್ಚುಗೆಗೆ ಪಾತ್ರರಾದರು.
.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಮಂತ ಬಿರಾದಾರ, ರಮೇಶ ಪಾಟೀಲ ಲತೀಪ್ ಪಟೇಲ,ಮುರುಗೇಂದ್ರ ಮಸಳಿ, ಶಾಂತು ಅಂಜುಟಗಿ, ಪ್ರಭಾವತಿ ಮೇತ್ರಿ,ಗುರು ಚಾಂದಕವಟೆ, ರಮೇಶ ಪಾಟೀಲ ಬಸವರಾಜ ಘಾಣೂರ, ಭೀಮರಾಯ ತಳವಾರ, ಸೇರಿದಂತೆ ಅನೇಕರಿದ್ದರು.


















