ಗೋವಿಂದಪುರ ಹತ್ಯಾಕಾಂಡ..! ಚಡಚಣ ಪಿಎಸ್ ಐ ಅಮಾನತು.!
ವಿಜಯಪುರ: ಕರ್ತವ್ಯ ಲೋಪ ಹಿನ್ನೆಲೆ ಚಡಚಣ ಪಿಎಸ್ಐನ್ನು ಎಸ್ಪಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಭೀಮಾತೀರದಲ್ಲಿ 6 ಜನರ ಹತ್ಯಾಕಾಂಡ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರಾರೆಂದು ಚಡಚಣ ಪಿಎಸ್ಐ ಸೋಮೇಶ ಗೆಜ್ಜಿನ್ನು ಅಮಾನತ್ತು ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಮೇ 29 ರಂದು ಚಡಚಣ ತಾಲೂಕಿನ ಗೋವಿಂದಪುರದ ಬಳಿ ನಡೆದಿದ್ದ ಹತ್ಯಾಕಾಂಡಕ್ಕೂ ಮೊದಲೇ ಪೊಲೀಸ್ ಠಾಣೆ ಮೆಟ್ಟಿಲು ನಿರಾಳೆ ಹಾಗೂ ಪಾಟೀಲ್ ಕುಟುಂಬಗಳು ಏರಿದ್ದರು. ಇನ್ನು ಜಗಳ ನಿರ್ವಹಣೆಯಲ್ಲಿ ಪಿಎಸ್ಐ ಲೋಪ ಕಂಡುಬಂದಿದೆ ಎಂದು ಅಮಾನತ್ತು ಮಾಡಲಾಗಿದೆ.

















