• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮೀನುಗಾರಿಕೆ ಉದ್ಯಮದಿಂದ ನಿರುದ್ಯೋಗ, ಬಡತನ ನಿರ್ಮೂಲನೆ ಸಾಧ್ಯ: ಶಾಸಕ ಸಿ.ಎಸ್. ನಾಡಗೌಡ

      Voiceofjanata.in

      March 15, 2026
      0
      ಮೀನುಗಾರಿಕೆ ಉದ್ಯಮದಿಂದ ನಿರುದ್ಯೋಗ, ಬಡತನ ನಿರ್ಮೂಲನೆ ಸಾಧ್ಯ: ಶಾಸಕ ಸಿ.ಎಸ್. ನಾಡಗೌಡ
      0
      SHARES
      45
      VIEWS
      Share on FacebookShare on TwitterShare on whatsappShare on telegramShare on Mail

      ಮೀನುಗಾರಿಕೆ ಉದ್ಯಮದಿಂದ ನಿರುದ್ಯೋಗ, ಬಡತನ ನಿರ್ಮೂಲನೆ ಸಾಧ್ಯ: ಶಾಸಕ ಸಿ.ಎಸ್. ನಾಡಗೌಡ

      ಮೀನುಗಾರಿಕಾ ಇಲಾಖೆ ನೂತನ ಕಚೇರಿ ಕಟ್ಟಡಕ್ಕೆ
      50 ಲಕ್ಷ ರೂ ವೆಚ್ಚದಲ್ಲಿ  ನಿರ್ಮಾಣದ ಭೂಮಿ ಪೂಜೆಗೆ ಶಾಸಕ ಸಿ ಎಸ್  ನಾಡಗೌಡ ಚಾಲನೆ.
      ​ಮುದ್ದೇಬಿಹಾಳ: ಮೀನುಗಾರಿಕೆ ಕ್ಷೇತ್ರವು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ನಮ್ಮ ಭಾಗದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳ ಮಧ್ಯೆ ಹರಿಯುವ ಕೃಷ್ಣಾ ನದಿ ತೀರದಲ್ಲಿ ಮೀನುಗಾರಿಕೆಗೆ ವ್ಯಾಪಕ ಅವಕಾಶಗಳಿವೆ. ಯುವಕರು ಈ ಕ್ಷೇತ್ರದಲ್ಲಿ ವೈಜ್ಞಾನಿಕ ತರಬೇತಿ ಪಡೆದುಕೊಂಡರೆ ನಿರುದ್ಯೋಗ ಮತ್ತು ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿದೆ ಎಂದು ಕೆಎಸ್‍ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
      ​ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಮೀನುಗಾರಿಕಾ ಇಲಾಖೆಯ ನೂತನ ಕಚೇರಿ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ಚಾಲನೆ ನೀಡಿ ಅವರು ಮಾತನಾಡಿದರು.
      ​ಸಿದ್ದಾಪುರದಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾರಾಯಣಪುರ ಗಡಿ ಭಾಗದ ಸಿದ್ದಾಪುರದಲ್ಲಿ 75 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಮೀನುಮರಿ ಉತ್ಪಾದನಾ ಕೇಂದ್ರಕ್ಕೆ (ಸೀಡ್ ಫಾರ್ಮ್) ಚಾಲನೆ ನೀಡಲಾಗಿತ್ತು. ಅಂದಿನ ಶಾಸಕ ವೆಂಕಟರಾವ ನಾಡಗೌಡರ ಮೂಲಕ 9 ಕೋಟಿ ರೂ. ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕೆಲಸಗಳು ಸಮರ್ಪಕವಾಗಿ ನಡೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
      ​ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಅಗತ್ಯ:
      ಸ್ಥಳೀಯವಾಗಿ ಮೀನುಗಾರಿಕೆಯಲ್ಲಿ ಆಸಕ್ತಿ ಕಡಿಮೆಯಿರುವುದರಿಂದ ಆಂಧ್ರ ಮತ್ತು ತಮಿಳುನಾಡಿನ ಮೀನುಗಾರರನ್ನು ಗುತ್ತಿಗೆದಾರರು ಬಳಸಿಕೊಳ್ಳುತ್ತಿದ್ದಾರೆ. ಮೀನುಗಾರರಿಂದ ಕೇವಲ 50-60 ರೂಪಾಯಿಗೆ ಮೀನು ಪಡೆದು ಮಾರುಕಟ್ಟೆಯಲ್ಲಿ 300 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ನಮ್ಮ ಭಾಗದ ಭೂಹೀನರು ಮತ್ತು ಹಿಂದುಳಿದ ವರ್ಗದವರು ಈ ವರದಾನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
      ​ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಭಾಂಗಿ ಮಾತನಾಡಿ, ಜಿ.ಪಂ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣವಾಗುತ್ತಿದ್ದು, ಶಾಸಕರು ಕಾಳಜಿಯಿಂದ ಜಾಗ ಒದಗಿಸಿದ್ದಾರೆ. ಮೀನುಗಾರರಿಗೆ ಲೈಫ್ ಜಾಕೆಟ್, ಬಲೆ ಹಾಗೂ ವಾಹನ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿಶೇಷ ಘಟಕ ಯೋಜನೆಯಡಿ ಫಲಾನುಭವಿ ಶಾಂತಾಬಾಯಿ ಲಮಾಣಿ ಅವರಿಗೆ ‘ಗೂಡ್ಸ್ ಕ್ಯಾಬ್’ ವಿತರಿಸಲಾಯಿತು.
      ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂ.ಬಿ.ನಾವದಗಿ, ಮಾಜಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ರಮೇಶ ಓಸ್ವಾಲ, ಪ್ರಭುರಾಜ ಕಲ್ಬುರ್ಗಿ,ಲ್ಯಾಂಡ್ ಆರ್ಮಿ ಇಂಜಿನಿಯರ್ ನಾಗರಾಜ ಬಿರಾದಾರ,ಮೀನುಗಾರಿಕೆ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
      ​
      ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ನಮ್ಮ ಭಾಗಕ್ಕೆ ದೇವರು ಕೊಟ್ಟ ವರದಾನ. ಆದರೆ ಇಲ್ಲಿನ ಮೀನುಗಾರಿಕೆ ಲಾಭವನ್ನು ಅನ್ಯ ರಾಜ್ಯದವರು ಪಡೆಯುತ್ತಿದ್ದಾರೆ. ನಮ್ಮ ಭಾಗದ ಯುವಕರು ಕೇವಲ ಕೂಲಿ ಕಾರ್ಮಿಕರಾಗದೆ, ಮೀನುಗಾರಿಕೆಯಲ್ಲಿ ಕೌಶಲ ಪಡೆದು ಸ್ವಂತ ಉದ್ಯಮ ಆರಂಭಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರುಕಟ್ಟೆ ಕಂಡುಕೊಂಡರೆ ಮೀನುಗಾರರ ಬದುಕು ಬಂಗಾರವಾಗಲಿದೆ. ಸಿದ್ದಾಪುರ ಸೀಡ್ ಫಾರ್ಮ್ ಅನ್ನು ಮತ್ತಷ್ಟು ಬಲಪಡಿಸಿ ಸ್ಥಳೀಯವಾಗಿ ಮೀನುಮರಿಗಳು ಸಿಗುವಂತೆ ಮಾಡುವುದು ನಮ್ಮ ಗುರಿ.”

      ​— ಸಿ.ಎಸ್. ನಾಡಗೌಡ, ಶಾಸಕರು ಹಾಗೂ ಅಧ್ಯಕ್ಷರು ಕೆಎಸ್‍ಡಿ ನಿಗಮ.

      Tags: #Fishing industry can eradicate unemployment and poverty: MLA C.S. Nad Gowda#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಮೀನುಗಾರಿಕೆ ಉದ್ಯಮದಿಂದ ನಿರುದ್ಯೋಗಬಡತನ ನಿರ್ಮೂಲನೆ ಸಾಧ್ಯ: ಶಾಸಕ ಸಿ.ಎಸ್. ನಾಡಗೌಡ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಳ್ಳಗಿ.ಬಿ ಕಾಲುವೆ ಹಾಳು: ರೈತರಿಗೆ ಜಮೀನಿಗೆ ತೆರಳಲು ರಸ್ತೆ ಇಲ್ಲ !

      ಅಳ್ಳಗಿ.ಬಿ ಕಾಲುವೆ ಹಾಳು: ರೈತರಿಗೆ ಜಮೀನಿಗೆ ತೆರಳಲು ರಸ್ತೆ ಇಲ್ಲ !

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಳ್ಳಗಿ.ಬಿ ಕಾಲುವೆ ಹಾಳು: ರೈತರಿಗೆ ಜಮೀನಿಗೆ ತೆರಳಲು ರಸ್ತೆ ಇಲ್ಲ !

      ಅಳ್ಳಗಿ.ಬಿ ಕಾಲುವೆ ಹಾಳು: ರೈತರಿಗೆ ಜಮೀನಿಗೆ ತೆರಳಲು ರಸ್ತೆ ಇಲ್ಲ !

      May 21, 2026
      ಬಳೂರಗಿ ತಾಂಡದಲ್ಲಿ ಧರೆಗೆ ಉರುಳಿದ 3 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು

      ಬಳೂರಗಿ ತಾಂಡದಲ್ಲಿ ಧರೆಗೆ ಉರುಳಿದ 3 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು

      May 21, 2026
      ಸಬ್ ರಿಜಿಸ್ಟರ್ ಅಧಿಕಾರಿ ಅಂಜಲಿ ಸಿ ವರ್ಗಾವಣೆಗೆ ಸರಕಾರಕ್ಕೆ ಪತ್ರ ಬರೆದ ಶಾಸಕ ಪಾಟೀಲ

      ಸಬ್ ರಿಜಿಸ್ಟರ್ ಅಧಿಕಾರಿ ಅಂಜಲಿ ಸಿ ವರ್ಗಾವಣೆಗೆ ಸರಕಾರಕ್ಕೆ ಪತ್ರ ಬರೆದ ಶಾಸಕ ಪಾಟೀಲ

      May 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.