ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ
ಇಂಡಿ : ಲಚ್ಯಾಣ ಮಠಕ್ಕೆ ನೂತನ ಪೀಠಾಧಿಪತಿ ಆಯ್ಕೆಯಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀ ಯರನಾಳದ ಸಂಗನಬಸವ ಶ್ರೀ ಜಿಡಗಾದ ಮುರಗೇಂದ್ರ ಶ್ರೀಗಳು ಮತ್ತು ಹಳಂಗಳಿಯ ಶಿವಾನಂದ ಶ್ರೀಗಳನ್ನು ಒಟ್ಟಿಗೆ ಸೇರಿಸಿ ಒಮ್ಮತದ ನಿರ್ಧಾರ ಮಾಡಿ ನೂತನ ಪೀಠಾಧಿಪತಿಗಳ ಆಯ್ಕೆ ಮಾಡಲಾಗುವದೆಂದು ಶಾಸಕ ಯಶವಂತರಾಯಗೌಡ ಪಾಟೀಲರು.
ತಾಲೂಕಿನ ಲಚ್ಯಾಣದ ಸಿದ್ದಲಿಂಗೇಶ್ವರ ಮಠದ ಆವರಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದರು.
ನಾನು ಸಿದ್ದಲಿಂಗ ಮಹಾರಾಜರ ಭಕ್ತ ಅವರ ಆರ್ಶೀವಾದದಿಂದಲೇ ಶಾಸಕ ನಾಗಿದ್ದೇನೆ. ನನಂತೆ ಸಾವಿರಾರು ಭಕ್ತರು ಲಚ್ಯಾಣ ಮಠದ ಮಹಾರಾಜರ ಭಕ್ತರಿದ್ದಾರೆ. ಶ್ರೀಮಠದ ಗೌರವ ಘನತೆ ಹೆಚ್ಚಿಸುವದು ಮತ್ತು ಸಿದ್ದಲಿಂಗ ಶ್ರೀ ಗಳ ಆಶಯದಂತೆ ನಡೆದು ಲಚ್ಯಾಣ ಮಠದ ಹೆಸರನ್ನು ರಾಜ್ಯದ ಮೂಲೆಗೆ ಹರಡಿಸಲು ಪ್ರಯತ್ನ ಮಾಡೋಣ ಎಂದರು.
ಲಚ್ಯಾಣದಲ್ಲಿ ಎಲ್ಲರೂ ಶಾಂತಿ ಪ್ರೀತಿಯಿಂದ ಬಾಳ ಬೇಕಾಗಿದೆ. ನಾನು ಕಾವಿ ಅಂದರೆ ಅದಕ್ಕೆ ಗೌರವ ಕೊಡುವೆ. ಆದಕ್ಕಾಗಿ ಪೀಠಾಧಿಪತಿ ವಿಚಾರದಲ್ಲಿ ನಾನು ಬೇಡ ಎಂದಿದ್ದೆ. ಭಕ್ತರ ನಿಮ್ಮೆಲ್ಲರ ಒತ್ತಾಯಕ್ಕೆ ಮಣಿದು ನಾನು ಮನಸಾಪೂರ್ವಕ ಕೆಲಸ ಮಾಡುವೆ ಎಂದರು.
ಡಿ.ಎಸ್.ಪಾಟೀಲ, ಅಪ್ಪಾಸಾಹೇಬ ತಾಂಬೆ, ಜಯರಾಮ ಚವ್ಹಾಣ, ಧನರಾಜ ಮುಜಗೊಂಡ, ಜಕ್ಕಪ್ಪ ಹತ್ತಳ್ಳಿ, ಬಸವರಾಕ ಕರಾಳೆ, ನಾನಾಗೌಡ ಪಾಟೀಲ, ಜಗದೇವಿ ನಾಗಣಸೂರ, ಸಿದ್ದನಗೌಡ ಪಾಟೀಲ, ಎ.ಪಿ.ಕಾಗವಾಡಕರ, ವಿನೋದ ಮುಜಗೊಂಡ ಮಾತನಾಡಿದರು.
ವೇದಿಕೆಯ ಮೇಲೆ ಹಳಂಗಳಿಯ ಶಿವಾನಂದ ಶ್ರೀಗಳು, ಭೀಮಣ್ಣ ಕವಲಗಿ, ಎಸ್.ಬಿ.ಬೂದಿಹಾಳ ವಕೀಲರು, ಬಸಲಿಂಗಪ್ಪ ಪಾಟೀಲ,ರಾಚಪ್ಪ ಗಳೇದ,ಕಲ್ಲನಗೌಡ ಬಿರಾದಾರ, ಬಿ.ಸಿ.ಸಾವಕಾರ, ಶಿವು ಜಾಲವಾದಿ, ಅಪ್ಪಣ್ಣ ಕಲ್ಲೂರ, ಪ್ರಶಾಂತ ಅಲಗೊಂಡ, ಪ್ರಶಾಂತ ಕಾಳೆ, ಜಾವೇದ ಮೋಮಿನ, ಶ್ರೀಮಂತ ಇಂಡಿ, ಜಟ್ಟೆಪ್ಪ ರವಳಿ ಮತ್ತಿತರಿದ್ದರು.
ಇಂಡಿ ತಾಲೂಕಿನ ಲಚ್ಯಾಣದ ಸಿದ್ದಲಿಳಗೇಶ್ವರ ಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.




















