ಲಿಂಗಸೂಗೂರು: ತಾಲೂಕಿನಾದ್ಯಂತ ವಿವಿಧೆಡೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದ್ದ ವಾಹನಗಳನ್ನು ಬಹಿರಂಗ ಹರಾಜು ನಾಳೆ ಮಾಡಲಾಗುತ್ತಿದೆ ಎಂದು ಪತ್ರ ಪ್ರಕಟಣೆಯನ್ನು ಲಿಂಗಸುಗೂರು ಅಬಕಾರಿ ನಿರೀಕ್ಷಕರು ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಅಬಕಾರಿ ನಿರೀಕ್ಷಕರು ಲಿಂಗಸೂಗುರು ವಲಯದಲ್ಲಿ, ರಾಯಚೂರು ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದಿನಾಂಕ 30 ರಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗುತ್ತದೆ.
ತಾಲೂಕಿನಾದ್ಯಂತ ಕೈಗೊಳ್ಳಲಾದ ದಾಳಿ ವೇಳೆ ವಶಪಡಿಸಿಕೊಂಡಿದ್ದ ಅಂತಹ ವಾಹನಗಳನ್ನು ಬಹಿರಂಗವಾಗಿ ಹರಾಜು ಪ್ರಕ್ರಿಯೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.