ಮುಕ್ತ ಕರಾಟೆ ರಾಷ್ಟ್ರೀಯ ಚಾಂಪಿಯನಶೀಪ್ ನಲ್ಲಿ ಸಾಧನೆ
ವಿಜಯಪುರ: ದಾವಣಗೇರಿಯಲ್ಲಿ ಕರ್ನಾಟಕ ಸ್ಪೋಟ್ಸ್ ಕರಾಟೆ ಸಂಸ್ಥೆಯ ವತಿಯಿಂದ ನಡೆದ ಮುಕ್ತ ಕರಾಟೆ ರಾಷ್ಟ್ರೀಯ ಚಾಂಪಿನಶಿಫನ ಪೈಟಿಂಗ ಮತ್ತು ಕಟಾ ವಿಭಾಗದಲ್ಲಿ ಇಲ್ಲಿಯ ಎ.ಕೆ. ಡಾನ್ಸ್ ಕರಾಟೆ ಅಕಾಡೆಮಿಯ ಕ್ರೀಡಾಪಟುಗಳು ಸಾಧನೆ ಮೆರೆದಿರುವರು. ಅಕಾಡೆಮಿ ದೇವರಾಜ, ಸೂರ್ಯಕಾಂತ, ಅಹಮ್ಮದಲಿ ಮುಲ್ಲಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಜ, ಪೂಜಾ, ಪ್ರಜ್ವಲ, ಪ್ರೀತಮ, ಅಫಜಲ ದ್ವಿತೀಯ ಸ್ಥಾನ ಹಾಗೂ ಪ್ರತೀಕ, ಸೋಮನಗೌಡ,ನೆಹರಿಕಾ, ಸುಮಿತ, ಅರವಿಂದ,ಪ್ರೀಯಂಕಾ, ಶಿಲ್ಪಾ, ಅಮರನಾಥ ತೃತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ತರಬೇತುದಾರ ಆಕಾಶ ರಾಠೋಡ, ಮ್ಯಾನೇಜರ ಅಹಮ್ಮದಲಿ ಮುಲ್ಲಾ ಭಾಗವಹಿಸಿದ್ದರು.



















