• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      20 ವರ್ಷ ಕಳೆದರೂ ಸಿಗದ ಕಾಲುವೆ ಪರಿಹಾರ:ಮದರಿ-ಗರಸಂಗಿ ರೈತರಿಂದ ಆಕ್ರೋಶ, ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ.

      By voiceofjanata.in

      May 3, 2026
      0
      20 ವರ್ಷ ಕಳೆದರೂ ಸಿಗದ ಕಾಲುವೆ ಪರಿಹಾರ:ಮದರಿ-ಗರಸಂಗಿ ರೈತರಿಂದ ಆಕ್ರೋಶ, ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ.
      0
      SHARES
      42
      VIEWS
      Share on FacebookShare on TwitterShare on whatsappShare on telegramShare on Mail

      20 ವರ್ಷ ಕಳೆದರೂ ಸಿಗದ ಕಾಲುವೆ ಪರಿಹಾರ:ಮದರಿ-ಗರಸಂಗಿ ರೈತರಿಂದ ಆಕ್ರೋಶ, ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ.

      20 ವರ್ಷಗಳ ಅನ್ಯಾಯ: ಕಾಲುವೆಗೆ ಜಮೀನು ನೀಡಿದ ಮದರಿ-ಗರಸಂಗಿ ಗ್ರಾಮದ ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ!

      ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರು: ಸ್ವಂತ ಖರ್ಚಿನಲ್ಲಿ ದಾಖಲೆ ಪತ್ರ ಒದಗಿಸಿ ಪರಿಹಾರಕ್ಕೆ ಆಗ್ರಹ.

      ​ಮುದ್ದೇಬಿಹಾಳ: ತಾಲ್ಲೂಕಿನ ಮದರಿ ಮತ್ತು ಗರಸಂಗಿ ಗ್ರಾಮದ ರೈತರ ಜಮೀನುಗಳಲ್ಲಿ ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡದಿರುವುದನ್ನು ಖಂಡಿಸಿ, ಸಂತ್ರಸ್ತ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಶನಿವಾರ ಎಲ್ಲಾ ದಾಖಲೆಗಳೊಂದಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
      ಮದರಿ ಮತ್ತು ಗರಸಂಗಿ ಗ್ರಾಮದ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಕಾಲುವೆ ಸಂಖ್ಯೆ 16ಎ-ಲ್ಯಾಟರಲ್ ನಂ.2 ಕ್ಕಾಗಿ ರೈತರು ತಮ್ಮ ಫಲವತ್ತಾದ ಜಮೀನನ್ನು ನೀಡಿದ್ದಾರೆ. ಕಾಲುವೆ ನಿರ್ಮಾಣವಾಗಿ 20 ವರ್ಷಗಳೇ ಗತಿಸಿವೆ. ಆದರೆ, ಈ ಭಾಗದ ರೈತರಿಗೆ ಇದುವರೆಗೂ ಸರ್ಕಾರದಿಂದ ನಯಾಪೈಸೆ ಪರಿಹಾರ ಧನ ತಲುಪಿಲ್ಲ. ಈ ಸಂಬಂಧ ರೈತರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ.

      ​ಅಧಿಕಾರಿಗಳ ವಿರುದ್ಧ ವಂಚನೆಯ ಆರೋಪ:

      ಈ ಹಿಂದೆ ಇದ್ದ ಬಿ.ಎಸ್. ಕುಂಟೋಜಿ ಎಂಬ ಅಧಿಕಾರಿಯು ರೈತರಿಗೆ ಸೂಕ್ತವಾಗಿ ಸ್ಪಂದಿಸದೆ ಕಾಲಹರಣ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ, ಖಾಸಗಿ ವ್ಯಕ್ತಿಯೊಬ್ಬರನ್ನು ಕಳುಹಿಸಿ ದಾಖಲೆಗಳ ಸಿದ್ಧತೆಯ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಂದ 500 ರೂ.ಗಳನ್ನು ವಸೂಲಿ ಮಾಡಲಾಗಿದ್ದರೂ, ಯಾವುದೇ ಕೆಲಸವಾಗಿಲ್ಲ ಎಂದು ರೈತರು ಪತ್ರದಲ್ಲಿ ದೂರಿದ್ದಾರೆ.

      ​ಸ್ವಂತ ಖರ್ಚಿನಲ್ಲಿ ದಾಖಲೆ ನೀಡಿದ ರೈತರು:

      ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಶೋಕ ಬಿರಾದಾರ ಅವರ ಸೂಚನೆಯಂತೆ, ರೈತರು ತಾವೇ ಸ್ವತಃ ಹಣ ಖರ್ಚು ಮಾಡಿ ಅಕ್ರಚಾರಿ, ಆಕಾರ ಬಂಧ, ನಕ್ಷೆ, ಟಿಪ್ಪಣಿ ಉತಾರೆ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಇಂದು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. “ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ನಾವೇ ಮಾಡಿಕೊಟ್ಟಿದ್ದೇವೆ, ಇನ್ನು ಮುಂದಾದರೂ ಪರಿಹಾರ ನೀಡಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

      ​ಸರ್ಕಾರಕ್ಕೆ ರೈತರ ಎಚ್ಚರಿಕೆ:

      ಕಳೆದ 20 ವರ್ಷಗಳಿಂದ ನಾವು ಅನ್ಯಾಯ ಅನುಭವಿಸುತ್ತಿದ್ದೇವೆ. ಇಂದಿನಿಂದ ಒಂದು ತಿಂಗಳ ಒಳಗಾಗಿ ಈ ಬಗ್ಗೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ನಮಗೆ ಪರಿಹಾರ ಕೊಡಿಸಬೇಕು. ಒಂದು ವೇಳೆ ಈ ಬಾರಿಯೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು. ಆಗುವ ಅನಾಹುತಗಳಿಗೆ ಇಲಾಖೆಯೇ ನೇರ ಹೊಣೆಯಾಗುತ್ತದೆ” ಎಂದು ರೈತರು ಅಂತಿಮ ಎಚ್ಚರಿಕೆ ನೀಡಿದ್ದಾರೆ.
      ​ಈ ಸಂದರ್ಭದಲ್ಲಿ ಪ್ರಶಾಂತ ನಾಡಗೌಡ, ಶರಣುಬಸು ಗೌಡರ,ಮಹಾಂತೇಶ ಉಗರಗೋಳ,ಸಂಗಮೇಶ ಹಿರೇಮಠ,ಶಿವರಾಜ ಮೇಟಿ ಮುತ್ತಪ್ಪ ಕಾನಿಕ್ಕಿ,ಸಂಗನಬಸಪ್ಪ ತೊಂಡಿಹಾಳ, ಮುನ್ನಾ ನದಾಪ,ಮಲ್ಲಪ್ಪ ತಿಗಳಿ,ಈರಪ್ಪ ಅಂಗಡಿ,ಶರಣಪ್ಪ ವಡ್ಡರ,ಗೋದವ್ವ ನಾಡಗೌಡ,ಹಣಮಂತ ವಾಲಿಕಾರ, ಸೇರಿದಂತೆ ಮದರಿ ಮತ್ತು ಗರಸಂಗಿ ಗ್ರಾಮದ ನೂರಾರು  ರೈತರು ಉಪಸ್ಥಿತರಿದ್ದು, ತಮ್ಮ ನ್ಯಾಯಯುತ ಹಕ್ಕಿಗಾಗಿ ಧ್ವನಿ ಎತ್ತಿದರು.

      Tags: #20 ವರ್ಷ ಕಳೆದರೂ ಸಿಗದ ಕಾಲುವೆ ಪರಿಹಾರ:ಮದರಿ-ಗರಸಂಗಿ ರೈತರಿಂದ ಆಕ್ರೋಶ#Canal solution not received even after 20 years: Madari-Garasangi farmers outraged#former#latest news#Muddebhall#Public News#State News#Today News#Voice Of Janata#VOICE OF JANATA (VOJ-VOJ)#Voiceofjanata.infinal warning to officials.Protestvijayapurಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0

      ಕರ್ನಾಟಕದ 41.54 ಲಕ್ಷ ರೈತರಿಗೆ ಲಭಿಸಲಿದೆ ನೆರವು

      June 19, 2026

      ಬೆಳೆ ವಿಮೆ ಯೋಜನೆಗೆ ನೋಂದಣಿಗೆ ಮನವಿ

      June 19, 2026

      ಸಂಸ್ಕರಣಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

      June 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.