ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಗೆ ಜೆ.ಎಂ.ಕೊರಬು ತಿರುಗೇಟು
ಅಫಜಲಪುರ:ತಂದೆ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ದುರಾಡಳಿತ ನಡೆಸುತ್ತಿರುವ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಅವರಿಗೆ ಪಶ್ಚಾತ್ತಾಪ ಆಗಬೇಕು,ಹೊರತೂ ನನಗೇನು ಪಶ್ಚಾತ್ತಾಪ ಆಗಿಲ್ಲ ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ತಿರುಗೇಟು ನೀಡಿದರು.ಪಟ್ಟಣದ ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಇತ್ತೀಚೆಗೆ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ಎಪ್ರಿಲ್ 4ರಂದು ಜೆ.ಎಂ.ಕೊರಬು ನೇತೃತ್ವದಲ್ಲಿ ರೈತರ ವಂತಿಕೆ ಹಣದಿಂದ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭಕ್ಕೆ ಎಂ.ವೈ.ಪಾಟೀಲ್ ಅವರನ್ನು ಕಾರ್ಯಕ್ರಮಕ್ಕೆ ಬರದಂತೆ ಅರುಣಕುಮಾರ ಪಾಟೀಲ್ ತಡೆದಿದ್ದಾರೆ ಎಂದು ವೇದಿಕೆಯಲ್ಲೇ ಜೆ.ಎಂ.ಕೊರಬು ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ ಎಂ.ವೈ.ಪಾಟೀಲರು ಕಾರ್ಯಕ್ರಮಕ್ಕೆ ಹೋಗಿರುವುದರಿಂದ ನಾನು ತಪ್ಪಾಗಿ ತಿಳಿದುಕೊಂಡು ಹೇಳಿಕೆ ಕೊಟ್ಟೆಯೆಂದು ಪಶ್ಚಾತ್ತಾಪದಿಂದ ಶಾಸಕರ ಮುಂದೆ ಜೆ.ಎಂ.ಕೊರಬು ಕಣ್ಣೀರು ಹಾಕಿದ್ದಾರೆಂದು ಹೇಳಿರುವುದು ಶುದ್ಧ ಸುಳ್ಳುವಾಗಿದೆ.ಅಫಜಲಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಈಗಲಾದರೂ ಎಚ್ಚೆತ್ತುಕೊಂಡು ಎಲ್ಲಾ ಸಮುದಾಯಗಳಿಗೂ ಸಮನಾದ ಅವಕಾಶಗಳು ಕೊಟ್ಟು ಸರಿಯಾಗಿ ನಡೆದುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರಲಿದೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಜನ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ನೋಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬೂಲ್ ಪಟೇಲ್, ಜಮೀಲ್ ಗೌಂಡಿ,ಗುರುಶಾಂತಯ್ಯ ಝಳಕಿಮಠ,ದುಂಡಪ್ಪ ಗೌಡಗೌಂವ ಉಪಸ್ಥಿತರಿದ್ದರು.










