ಎಸ್‌ಟಿ ಪ್ರಮಾಣಪತ್ರಕ್ಕೆ ಜು.27ರಿಂದ ದೀರ್ಘದಂಡ ನಮಸ್ಕಾರ: ಸಂತೋಷ ತಳವಾರ
ಅಫಜಲಪೂರ: ಕಲಬುರಗಿ ಜಿಲ್ಲೆಯಲ್ಲಿ ತಳವಾರ ಸಮಾಜದ ಜನರಿಗೆ ತಡೆ ಹಿಡಿದ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನೀಡಬೇಕು ಹಾಗೂ ಅಫಜಲಪೂರ ತಾಲೂಕಿನ ಗ್ರೇಡ್-2 ತಹಶೀಲ್ದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಜುಲೈ 27ರಂದು (ಸೋಮವಾರ) ಬೆಳಿಗ್ಗೆ 10:30ಕ್ಕೆ ದೀರ್ಘದಂಡ ನಮಸ್ಕಾರ: ಹಮ್ಮಿಕೊಳ್ಳಲಾಗಿದೆ ಎಂದು
ತಳವಾರ ಸಮಾಜದ ತಾಲೂಕು ಅಧ್ಯಕ್ಷ ಸಂತೋಷ ತಳವಾರ ಹೇಳಿದರು.
ಪಟ್ಟಣದಲ್ಲಿ ಈಶಾನ್ಯ ಟೈಮ್ಸ್ ಯೊಂದಿಗೆ ಮಾತನಾಡಿದ ಅವರು ಅಫಜಲಪುರ ತಹಶೀಲ್ದಾರ ಕಚೇರಿಯಿಂದ ಕಲಬುರಗಿ ನಗರದಲ್ಲಿರುವ ಶಾಸಕ ಎಂ.ವೈ. ಪಾಟೀಲ ಅವರ ನಿವಾಸದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯ ಬಳಿಕವೂ ಸಮಾಜದ ಬೇಡಿಕೆಗಳು ಈಡೇರುವವರೆಗೆ ಶಾಸಕ ಎಂ.ವೈ. ಪಾಟೀಲ ಅವರ ನಿವಾಸದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಈ ಹೋರಾಟದಲ್ಲಿ ತಳವಾರ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ನ್ಯಾಯ ದೊರಕುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಸಂತೋಷ ತಳವಾರ ತಿಳಿಸಿದರು.
ಅನಿಸಿಕೆ 1
ತಳವಾರ ಸಮಾಜದ ಜನರಿಗೆ ನ್ಯಾಯ ದೊರಕುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಾಜದ ಸದಸ್ಯರಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಬೇಕು ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು .
ಸಂತೋಷ ತಳವಾರ( ಅಧ್ಯಕ್ಷರು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ಅಫಜಲಪುರ)
ಈ ಸಂದರ್ಭದಲ್ಲಿ ರವೀಂದ್ರ ಜಮಾದಾರ , ಮಲ್ಲಿಕಾರ್ಜುನ ಚೌರಾದ, ಆನಂದ ಹಂಚನಾಳ, ಮಹೇಶ ನಾಟೀಕಾರ ಇದ್ದರು.