ಇಂಡಿ : ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಅಭಿಯಾನದ ಶೈಕ್ಷಣಿಕ ವರ್ಷದ ಅಂಗವಾಗಿ ಎರಡನೇ ಜೊತೆ ಸಮವಸ್ತ್ರ ಶಾಲಾ ಮಕ್ಕಳಿಗೆ ವಿತರಿಸಲಾಯಿತು ಎಂದು ಮು.ಗು ಎನ್ ಜೆ ಕೊಡಹೊನ್ನ ತಿಳಿಸಿದರು.
ತಾಲ್ಲೂಕಿನ ಸರಕಾರಿ ಎಚ್ .ಪಿ.ಎಸ್ ಶಾಲೆಯಲ್ಲಿ ೧ ರಿಂದ ಏಳನೆಯ ತರಗತಿಯವರೆಗೆ ಕಲಿಯುವ ಮಕ್ಕಳಿಗೆ ಸಮವಸ್ತ್ರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.