ಇಂಡಿ: ಇಂಡಿ ತಾಲೂಕಾ ಅನುದಾನರಹಿತ ಸಂಸ್ಕೃತ ಪಾಠಶಾಲೆಗಳ ಒಕ್ಕೂಟದ ಅಡಿಯಲ್ಲಿ ಇಂಡಿಯ ವಿಜಯಪುರ ರಸ್ತೆಯ ಕಿತ್ತೂರು ಚೆನ್ನಮ್ಮ ಶಾಲೆಯ ಹಾಗೂ ಶ್ರೀ ಶಾಂತೇಶ್ವರ ಸಂಸ್ಕೃತ ಪಾಠಶಾಲೆ ಆಶ್ರಯದಲ್ಲಿ ಸಂಸ್ಕೃತ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ವಿದ್ವಾನ್ ಶ್ರೀ ಮನೋಹರ್ ಸವಾಯಿಯವರು ನೆರವೇರಿಸಿದರು. ಶಿಬಿರವ್ನುದ್ದೇಶಿಸಿ ಮಾತನಾಡಿದ ಅವರು ಸಂಸ್ಕೃತ ಭಾಷೆಯು ಯೋಗಿಕವಾದ ಭಾಷೆಯಾಗಿದೆ. ಸಂಸ್ಕೃತ ಭಾಷೆಯ ಬಳಕೆಯಿಂದಾಗಿ ಹಲವಾರು ಕಾಯಿಲೆಗಳಿಗೆ ಮದ್ದಾಗಿದೆ. ಆದರಿಂದ ಸಂಸ್ಕೃತ ಭಾಷೆಯ ಬಳಕೆಯಿಂದಾಗಿ ನಿರೋಗಿಗಳಾಗಿ ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ವಾನ್ ಮನೋಹರ ಶಿವಣಗಿ ಮಾತನಾಡಿ ಸಂಸ್ಕೃತ ಭಾಷೆಯು ಪ್ರಪಂಚ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಅಲ್ಲದೆ ದೇವಾಮೃತ ತುಂಬಿದ ಭಾಷೆಯಾಗಿದೆ. ನಾವುಗಳು ಸಂಸ್ಕೃತ ಭಾಷೆಯ ಬಳಕೆಯನ್ನು ಮಾಡಿ ಪ್ರಾಚೀನ ಪರಂಪರೆ ಉಳಿಸೋಣ ವೇಂದು ಹೇಳಿದರು. ಮುಖ್ಯ ಅಥಿಗಳಾಗಿ ಶರಣು ಇಂಡಿ, ಸಿದ್ದು ಡಂಗಾ, ಗೋಪಾಲ ಗಿಣ್ಣಿ, ಪಾಪಣ್ಣಿ ಶೇಖದಾರ, ಹಾಗೂ ಶಿಬಿರಾರ್ಥಿಗಳಾಗಿ ಸಂಸ್ಕೃತ ಪಾಠಶಾಲೆ ಶಿಕ್ಷಕರು ಹಾಗೂ ಆಸಕ್ತರು ಉಪಸ್ಥಿತರಿದ್ದರು. ಶಿವಾನಂದ ಕಲ್ಮನಿ ನಿರೂಪಿಸಿ ವಂದಿಸಿದರು.