ಇಂಡಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರ ದಾಳಿಗೈದು 70ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸೋನಕನಹಳ್ಳಿ ಬಳಿ ನಡೆದಿದೆ.
ಮುಕ್ತಿಯಾರ ಅಹ್ಮದ್ ಕೂಡ್ಲೆ, ಸದ್ದಾಂ ಮುಲ್ಲಾ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 5 ಲಕ್ಷ ಮೌಲ್ಯದ 70 ಕೆಜಿ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.