ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ವಿಶ್ವ ಮಲೇರಿಯಾ ದಿನವನ್ನ ಆಚರಣೆ ಮಾಡಲಾಯಿತು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಜನ ವಸತಿ ಸ್ಥಳಗಳಿಗೆ ತೆರಳಿ ಮಲೇರಿಯಾ ರೋಗದ ಬಗ್ಗೆ ಅರಿವನ್ನ ಮೂಡಿಸಲಾಯಿತು. ಕೇವಲ ಸೊಳ್ಳೆಗಳಿಂದ ಮಲೇರಿಯಾ ಮಾತ್ರವಲ್ಲ ಡೆಂಗ್ಯೂ ಚಿಕನ್ ಗುನ್ಯಾ ಮೆದುಳು ಜ್ವರ ಹರಡುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಅದಕ್ಕೆ ಸಾರ್ವಜನಿಕ ರು ರೋಗ ಬರದಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಬಲ್ಲಟಗಿಯ ಆಡಳಿತ ವೈದ್ಯಾಧಿಕಾರಿಯಾದ ಡಾ॥ ಮಲ್ಲಿಕಾರ್ಜುನ ರೆಡ್ಡಿ , ಜನ ಸಾಮಾನ್ಯರಿಗೆ ಅರಿವನ್ನ ಮುಡಿಸಿರುವಗದಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರಕ್ಷಣಾಧಿಕಾರಿಗಾಳಾದ ಭೀಮ ಶಂಕರ, ಪಾರ್ವತಿ, ಅಂಗನವಾಡಿ ಮೇಲ್ವಿಚಾರಿಕೆಯಾದ ಶ್ರೀಮತಿ ಲಕ್ಷ್ಮಿ ಡೆಂಗೀ ಹಾಗೂ ಅಂಗನವಾಡಿ ಕಾರ್ಯಕರ್ತರು ಬಲ್ಲಟಗಿ ಗ್ರಾಮಸ್ಥರು ಉಪಸ್ಥಿತರಿದ್ದರು.