ಅಫಜಲಪುರ: ತಾಲೂಕಿನ ಕರಜಗಿ ಗ್ರಾಮಲ್ಲಿ ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಇಶಾ ಪಂತ್ ರವರಿಂದ ನಿಮ್ಮ ಮನೆ ಬಾಗಿಲಿಗೆ ಪೋಲಿಸ್ ಅಭಿಯಾನ ಮತ್ತು ಗ್ರಾಮ ಸಭೆ ನಡೆಯಿತು. ಈ ವೇಳೆ ಎಸ್ಪಿ ಪಂತ್ ಮಾತನಾಡಿ ಗ್ರಾಮಗಳಲ್ಲಿ ಯಾವುದೇ ಅಫರಾದಗಳು ನಡೆಯಬಾರದು. ಮಹಿಳೆಯರ ಮೇಲೆ ಶೋಷಣೆ ದೌರ್ಜನ್ಯ ನಡೆಯಕೂಡದು ಎಂದು ಗ್ರಾಮಸ್ಥರಲ್ಲಿ ಕಾನೂನು ಅರಿವು ಮೂಡಿಸಿದರು.
ನಂತರ ಎಸ್ಪಿ ರವರಿಗೆ ಗ್ರಾಮದ ಮುಖಂಡರಾದ ರಾಜಕುಮಾರ್ ಜಿಡ್ಡಗಿ ,ರಾಮಣ್ಣ ನಾಯಕೋಡಿ ಹಾಗೂ ಗ್ರಾಮಸ್ಥರಿಂದ ಪೋಲಿಸ್ ಸ್ಟೇಷನ್ ಮಾಡಬೇಕು ಎಂದು ಮನವಿ ಪತ್ರ ಸಲ್ಲಸಿದರು.
ಈ ಸಂದರ್ಭದಲ್ಲಿ ಆಳಂದ ಡಿವೈಎಸ್ಪಿ ರವಿಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ವಿಶ್ವನಾಥ್ ಮುದರೆಡ್ಡಿ, ಗ್ರಾಮಸ್ಥರಾದ ರಾಜಕುಮಾರ್ ಜಿಡ್ಡಗಿ, ರಾಮಣ್ಣ ನಾಯಕೋಡಿ, ವಿಠೋಬಾ ಪೂಜಾರಿ, ಬಸಿರ್ ಚೌಧರಿ, ಪಿರಪ್ಪ ನಾಯಕೋಡಿ, ಸಿದ್ದಪ್ಪ ಹಳಗೋದಿ, ಚೌಡಮ್ಮ, ಸುಭಾಷ್ ಮರಬ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.