ಇಂಡಿಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ..!
ಪಟ್ಟಣದ ವಾರ್ಡ್ ನಂಬರ್ 12 ರಲ್ಲಿ “ನನ್ನ ಮಣ್ಣು ನನ್ನ ದೇಶ” ಅಭಿಯಾನ
ಇಂಡಿ : 76ನೇಯ ಸ್ವಾತಂತ್ರ್ಯೋತ್ಸವ ಸವಿನೆನಪಿಗಾಗಿ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮವನ್ನು ನಗರದ ವಾರ್ಡ್ ನಂಬರ್ 12ರಲ್ಲಿ ಆಚರಣೆಗಳು ಮಾಡಲಾಯಿತು. ವಾರ್ಡ ನಾಗರೀಕರು ಹಾಗೂ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೆ ರಾಮಪ್ಪ ಮಾತನಾಡಿದ ಅವರು ,ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ದೇಶ ಭಕ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ.
ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಸುದೀರ ಕರಕಟ್ಟಿ, ಪುರಸಭಾ ನೂತನ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಆರೋಗ್ಯ ಅಧಿಕಾರಿ ಸೋಮನಾಕ, ಮಾಜಿ ಸೈನಿಕರರಾದ, ಬಂಕೂರ, ಹಂಚಾಟೆ, ಬಿರಾದಾರ ಹಾಗೂ ವಾರ್ಡ್ ನಿವಾಸಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು