• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯ

      Voiceofjanata.in

      November 4, 2025
      0
      ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯ
      0
      SHARES
      23
      VIEWS
      Share on FacebookShare on TwitterShare on whatsappShare on telegramShare on Mail

      ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯ

      ವಿಜಯಪುರ: ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯವಾಗಿದ್ದು, ಜಲಸಂಪನ್ಮೂಲ ಸಚಿವರಾಗಿ ಅವರು ಮಾಡಿದ ಕೆಲಸಗಳಿಂದಾಗಿ ಆಧುನಿಕ ಭಗೀರಥ ಎನಿಸಿಕೊಂದ್ದಾರೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೇಳಿದ್ದಾರೆ.

      ಇಂದು ಶನಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

      ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಅನುಭವ ಮಂಟಪದ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಲಾಗಿತ್ತು. ಸಚಿವರು ಈ ತತ್ಚಗಳಡಿ ಕಾಯಕ ಮಾಡುತ್ತಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೇರಿ ಚುಕ್ಕಾಣಿ ಹಿಡಿಯಲಿ ಎಂದು‌‌ ಆಶೀರ್ವದಿಸಿದರು

      ಬಸವನಾಡಿನಲ್ಲಿ ಜನರು ಜಾತಿಯ ಬದಲು ನೀತಿಯನ್ನು ನೋಡುತ್ತಾರೆ. ಸ್ವಾಮೀಜಿಗಳಿಂದ ಜ್ಞಾನ ಸವಿಯುತ್ತಾರೆ. ಫಲಾಪೇಕ್ಷೆಯಿಲ್ಲದೇ ಗುರುಗಳನ್ನು ಗೌರವಿಸುತ್ತಾರೆ. ಶಿಕ್ಷಣ, ಸಂಘಟನೆ,‌ ಸಂಸ್ಕಾರದ ಮೂಲಕ‌ ಅಭಿವೃದ್ಧಿ ಹೊಂದಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

      ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ‌ಜಲಮೂಲಗಳ ಬಳಿ ನಾಗರಿಕತೆಗಳು ಪ್ರಾರಂಭವಾಗಿವೆ. ಆದರೆ, ಭಗೀರಥ ಮಹರ್ಷಿಗಳು ಗಂಗೆಯನ್ನು ಜಲದ ರೂಪದಲ್ಲಿ ಭೂಲೋಕಕ್ಕೆ ತಂದ ರಾಜ ಋಷಿಯಾಗಿದ್ದಾರೆ ಎಂದು ಹೇಳಿದರು.

      ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಈ ಹಿಂದೆ ಮಳೆಯಾಶ್ರಿತ ಬೇಸಾಯ ಮಾಡುತ್ತಿದ್ದ‌ ರೈತರು ಸುಸ್ಥಿರ ಕೃಷಿ ಮಾಡಲು ಅನುಕೂಲವಾಗಿದೆ. ಕಾಖಂಡಕಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದೆ. ಈಗ ಇಲ್ಲಿಗೆ ಜಲದ ರೂಪದಲ್ಲಿ ಲಕ್ಷ್ಮಿ ಬಂದಿದ್ದಾಳೆ. ಇನ್ನು ಮುಂದೆ ಸರಸ್ವತಿಯೂ ನೆಲೆಸಲಿದ್ದಾಳೆ. ಈ ಸಮುದಾಯ‌ ಈಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

      ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಭಾರತೀಯರಾದ ನಾವೆಲ್ಲರೂ ದುಶ್ಚಟಗಳಿಂದ ದೂರವಿದ್ದು, ಜಾತಿಭೇದ ಮರೆತು ಸದವಿಚಾರಗಳನ್ನು ಅಳವಡಿಸಿಕೊಳ್ಳಬೇಕು.
      ಎತ್ತಿಹಿಡಿಯಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ಹಿಡಿದ ಕೆಲಸವನ್ನು ಮಾಡಿ ತೋರಿಸುವ ಸಚಿವರ ಕೆಲಸ‌ ಕಾರ್ಯಗಳು ಸದಾಕಾಲ ಉಳಿಯಲಿವೆ ಎಂದು ಹೇಳಿದರು.

      ಶಿಕ್ಷಕ ಲಕ್ಷ್ಮಣಗೌಡ ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕಂಚಿನ ಪುತ್ಥಳಿ ಸ್ಥಾಪಿಸಲು ಸಚಿವರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಸದಾ ನಮ್ಮ ಸಮಾಜದ ಹಿತ ಕಾಪಾಡುತ್ತಿದ್ದಾರೆ. ಪ್ರತಿ ಊರಲ್ಲಿ ಭಗೀರಥ ಸಮುದಾಯ ಭವನ, ಪುತ್ಥಳಿ ಸ್ಥಾಪಿಸಲು ನೆರವಾಗಿದ್ದಾರೆ ಎಂದು ಹೇಳಿದರು.

      ಕಾಖಂಡಕಿ ಶ್ರೀ ನಿಜಲಿಂಗಯ್ಯ ಮಹಾಸ್ವಾಮಿಗಳು, ಚಿಕ್ಕಾಲಗುಂಡಿಯ ಶ್ರೀ ಶಿವಶರಣಾನಂದ ಮಹಾಸ್ವಾಮಿಗಳು,
      ಉಪ್ಪಾರ ಅಭಿವೃದ್ಧಿ ನಿಗಮ‌ ಅಧ್ಯಕ್ಷ ಭರಮಣ್ಣ ಉಪ್ಪಾರ ಮಾತನಾಡಿದರು.

      ಈ ಸಂದರ್ಭಸಂದರ್ಭದಲ್ಲಿ ಕಾಖಂಡಕಿಯ ಅಶೋಕ ಹುಚ್ಚಪ್ಪಯ್ಯ ದಿಗಂಬರಿಮಠ, ಮುಖಂಡರಾದ ರಾಮನಗೌಡ ಬಿ. ಪಾಟೀಲ, ಬಾಪುಗೌಡ ಬಿ. ಪಾಟೀಲ ಶೇಗುಣಸಿ, ಮುತ್ತಪ್ಪ ಕೆ.‌ ಶಿವಣ್ಣವರ, ಜಕ್ಕಪ್ಪ ಯಡವೆ, ಅನೀಲ ಅವಳೆ, ಸೋಮಶೇಖರ ಬಂಡಿ, ಶಂಕರ ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ, ಪದ್ಮಾವತಿ ಗೌಡಪ್ಪಗೋಳ, ಅರವಿಂದ ಕೆ. ಕೊಪ್ಪದ, ರುಕ್ಮಾಬಾಯಿ ಚ. ಲೆಂಕಪ್ಪಗೋಳ, ರಾಜು ಮು. ತೇಲಣ್ಣವರ, ಮಲ್ಲಿಕಾರ್ಜುನ ಹು. ಪರಸನ್ನವರ, ಅಲಿಸಾಬ ಎಂ. ಖಡಕೆ, ಈರಗೊಂಡ ಬಿರಾದಾರ, ರಮೇಶ ಹೆಬ್ಬಿ, ವಿ. ಎಸ್. ಪಾಟೀಲ, ನಂದಕುಮಾರ ಚಂದರಗಿ, ಉಮೇಶ ಮಲ್ಲಣ್ಣವರ, ಮಲ್ಲು ಲೆಂಕಪ್ಪಗೋಳ, ಭೀಮಪ್ಪ ಸ. ಮೋಳಗಿ, ಸಂಗಪ್ಪ ಗಾಂಜಿ, ಕಿರಣ ದಳವಾಯಿ, ಸಂಗಪ್ಪ ಪಡಸಲಗಿ, ಬಸವರಾಜ ಹಕಾರಿ, ನಾಗರಾಜ ಹೊನವಾಡ, ಲಕ್ಷ್ಮಣಗೌಡ ವಿ. ಪಾಟೀಲ, ಈರಣ್ಣ ಮಾಡಲಗಿ ಮುಂತಾದವರು ಉಪಸ್ಥಿತರಿದ್ದರು.

      Minister MBP Kakhansaki Bhagirath Statue Inauguration

      ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿಯನ್ನು ಸಚಿವ ಎಂ.‌ ಬಿ. ಪಾಟೀಲ‌‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಬಾಪುಗೌಡ ಪಾಟೀಲ ಶೇಗುಣಸಿ, ಭರಮಣ್ಣ ಉಪ್ಪಾರ ಮುಂತಾದವರು ಉಪಸ್ಥಿತರಿದ್ದರು.

      Minister MBP Kakhansaki Bhagirath Statue Inauguration

      ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಎಂ.‌ ಬಿ. ಪಾಟೀಲ‌‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಕಾಖಂಡಕಿ ಶ್ರೀ ನಿಜಲಿಂಗಯ್ಯ ಮಹಾಸ್ವಾಮಿಗಳು, ಚಿಕ್ಕಾಲಗುಂಡಿಯ ಶ್ರೀ ಶಿವಶರಣಾನಂದ ಮಹಾಸ್ವಾಮಿಗಳು,

      ಉಪ್ಪಾರ ಅಭಿವೃದ್ಧಿ ನಿಗಮ‌ ಅಧ್ಯಕ್ಷ ಭರಮಣ್ಣ ಉಪ್ಪಾರ ಮುಂತಾದವರು ಉಪಸ್ಥಿತರಿದ್ದರು.

      Tags: #indi / vijayapur#Minister M. B. Patil's work is always appreciated#Public News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯ
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.