• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮಾನವ ಹಕ್ಕುಗಳ ದಿನಾಚರಣೆ ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಜಿಲ್ಲಾಧಿಕಾರಿ ಟಿ.ಭೂಬಾಲನ್

      Voiceofjanata.in

      December 11, 2024
      0
      ಮಾನವ ಹಕ್ಕುಗಳ ದಿನಾಚರಣೆ ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಜಿಲ್ಲಾಧಿಕಾರಿ ಟಿ.ಭೂಬಾಲನ್
      0
      SHARES
      170
      VIEWS
      Share on FacebookShare on TwitterShare on whatsappShare on telegramShare on Mail

      ಮಾನವ ಹಕ್ಕುಗಳ ದಿನಾಚರಣೆ
      ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಜಿಲ್ಲಾಧಿಕಾರಿ ಟಿ.ಭೂಬಾಲನ್

      ವಿಜಯಪುರ ಡಿಸೆಂಬರ್ 10 : ಮಾನವ ಹಕ್ಕುಗಳ ಅನುಸರಣೆ ಹಾಗೂ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದು ನಮ್ಮ ಹೊಣೆಯೂ ಆಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಬಹು ದೊಡ್ಡ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ಸಂವಿಧಾನ ಕಲ್ಪಿಸಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು. ಸರ್ವರ ಮಾನವ ಹಕ್ಕುಗಳ ರಕ್ಷಣೆ ನಮ್ಮೆ ಹೊಣೆಯಾಗಿದೆ. ಮಾನವ ಹಕ್ಕುಗಳ ಕುರಿತು ಶಾಲಾ-ಕಾಲೇಜ್‍ನಲ್ಲಿ ಜಾಗೃತಿ ಅರಿವು ಮೂಡಿಸಬೇಕು. ಮಾನವ ಹಕ್ಕುಗಳ ವ್ಯಾಪಕ ತಿಳುವಳಿಕೆ-ಅರಿವು ಮೂಡಿಸಲು ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

      ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದಾಗಿದೆ. ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವುದಾಗಿದೆ. ಬಡವ-ಬಲ್ಲಿದ ಎನ್ನದೇ ಎಲ್ಲರ ಹಕ್ಕುಗಳು ರಕ್ಷಣೆಯಾಗಬೇಕು. ಮೂಲಭೂತ ಹಕ್ಕುಗಳಿಗೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ನಾವೆಲ್ಲರೂ ನಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘಣೆಯಾಗದಂತೆ ನೋಡಿಕೊಂಡು ನಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪ್ರತಿಯೊಬ್ಬರಿಗೂ ಘನತೆಯಿಂದ ಜೀವನ ನಡೆಸುವ ಹಕ್ಕಿದೆ ಎಂದು ಹೇಳಿದರು.

      ಮಾನವ ಹಕ್ಕುಗಳ ರಕ್ಷಣೆಗೆ ಅವುಗಳ ಪರಿಣಾಮಕಾರಿ ಜಾರಿಗೆ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ 1993ರನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿದೆ. ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾದ ಸಂದರ್ಭಗಳಲ್ಲಿ ಕುಂದು-ಕೊರತೆ ಪರಿಹರಿಸಲು ಮಾನವ ಹಕ್ಕುಗಳ ಆಯೋಗ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

      ನಾವು ನಿರ್ವಹಿಸುವ ಪ್ರತಿಯೊಂದು ಕೆಲಸ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಹಿಳೆಯರು, ಅಶಕ್ತರು, ವಿಕಲಚೇತನರು, ಮಕ್ಕಳ ಹಕ್ಕುಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
      ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ, ಎಲ್ಲರೂ ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು. ಪ್ರತಿಯೊಬ್ಬರೂ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಶುದ್ಧನೀರು, ಗಾಳಿ, ಆಹಾರ ಒದಗಿಸುವುದು ಮಾನವ ಹಕ್ಕುಗಳಾಗಿವೆ. ಗೌರವ ಹಾಗೂ ಘನತೆಯಿಂದ ಜೀವಿಸುವ ಹಕ್ಕಿದೆ. ನಮ್ಮ ಸಂವಿಧಾನದ ಮೂಲ ಆಶಯವೂ ಹಕ್ಕುಗಳ ಪಾಲನೆಯಾಗಬೇಕು ಎಂಬುದಾಗಿದೆ. ಮಾನವ ಹಕ್ಕುಗಳ ರಕ್ಷಣೆಗಾಗಿಯೇ ಕಾನೂನುಗಳಾಗಿವೆ. ಎಲ್ಲರೂ ಕಾನೂನಿನ ಅರಿವು ಹೊಂದಬೇಕು. ವಿಶ್ವಮಾನವ ಕಲ್ಪನೆ ಹೊಂದಬೇಕು. ಒಳ್ಳೆಯ ಸಮಾಜ ನಿರ್ಮಾಣದಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ಬಾಲಕಾರ್ಮಿಕ ತಡೆ, ಮಹಿಳೆಯರಿಗೆ ಅಶಕ್ತರಿಗೆ ಗೌರವ ನೀಡಬೇಕು. ಕಾನೂನು ಬಲ್ಲವರಿಗೆ ಸಂಕಟವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕಾನೂನು ಬಗ್ಗೆ ತಿಳುವಳಿಕೆ ಹೊಂದಿ ಗೌರವಯುತ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

      ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಉಪನ್ಯಾಸ ನೀಡಿ, ಪ್ರೀತಿ ವಿಶ್ವಾಸದಿಂದ ಬದುಕು ಮೂಲಕ ಎಲ್ಲರ ಹಕ್ಕುಗಳ ಸಂರಕ್ಷಣೆಯಾಗಬೇಕು. ನಿಸರ್ಗದತ್ತವಾದ ಬಂದ ಹಕ್ಕುಗಳನ್ನು ಪಡೆದಿರುತ್ತಾರೆ. ಅವುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಮಾನವ ಹಕ್ಕುಗಳ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನಲೆ ಗೌರವಾರ್ಥವಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

      ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಬಿ.ಎಂ.ಕೊಟ್ರೇಶ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

      Tags: #Human Rights Day Protection of human rights is everyone's responsibility : District Collector T. Bhubalan#indi / vijayapur#Public News#State News#Today News#Voiceofjanata.in#ಮಾನವ ಹಕ್ಕುಗಳ ದಿನಾಚರಣೆ ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಜಿಲ್ಲಾಧಿಕಾರಿ ಟಿ.ಭೂಬಾಲನ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      June 24, 2026
      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      June 23, 2026
      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      June 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.