ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ
ಇಂಡಿ: ಕರ್ನಾಟಕ ರಾಜ್ಯ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನೀಡಲಾಗುವ ಸಾಧನಾ ರಾಜ್ಯ ಪ್ರಶಸ್ತಿ–2026ಕ್ಕೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಕುಮಾರ ಕಾರ್ತಿಕ ಸಾಲೋಟಗಿ ಅವರು ಆಯ್ಕೆಯಾಗಿದ್ದಾರೆ.
ಕುಮಾರ ಕಾರ್ತಿಕ ಸಾಲೋಟಗಿ ಅವರು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಇಂಡಿ ತಾಲ್ಲೂಕು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಾಧನೆ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 15ರಂದು ವಿಜಯಪುರ ನಗರದ ಗೋಕುಲ್ ಗ್ರ್ಯಾಂಡ್ ರೆಸಿಡೆನ್ಸಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಸಾಧನಾ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಆಯ್ಕೆಯಾಗಿರುವ ಕಾರ್ತಿಕ ಸಾಲೋಟಗಿ ಅವರಿಗೆ ಇಂಡಿ ತಾಲ್ಲೂಕಿನ ಸ್ನೇಹಿತರು ಹಾಗೂ ಸಾಲೋಟಗಿ ಗ್ರಾಮದ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಉತ್ತಮ ಮಾದರಿ ವ್ಯಕ್ತಿಯಾಗಿ ಬೆಳೆದು ಗ್ರಾಮದ ಗೌರವ ಹಾಗೂ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.
















