ಗ್ರಾಪಂ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ ವೀಕ್ಷಿಸಿ
Voiceofjanata.in : EDITOR : ಬೆಂಗಳೂರು: ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಗ್ರಾಮಪಂಚಾಯಿತಿ 265 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. 31 ಜಿಲ್ಲೆಯ 135 ತಾಲೂಕುಗಳ 223 ಗ್ರಾಮ ಪಂಚಾಯಿತಿಗಳಲ್ಲಿನ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 8 ರಿಂದ 28ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. –
ಮೇ 8 ರಂದು ನಾಮಪತ್ರ ಸಲ್ಲಿಕೆ ಆರಂಭ, ಮೇ 25 ಮತದಾನ
ವೇಳಾಪಟ್ಟಿ:ಮೇ 8: ಚುನಾವಣೆ ಅಧಿಸೂಚನೆ
ಮೇ 14: ನಾಮಪತ್ರ ಸಲ್ಲಿಸಲು ಕೊನೇ ದಿನ
ಮೇ 15: ನಾಮಪತ್ರ ಪರಿಶೀಲನೆ
ಮೇ 17:ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನ
ಮೇ 25: ಮತದಾನ
ಮೇ 27: ಮರುಮತದಾನ (ಅವಶ್ಯವಿದ್ದರೆ)
ಮೇ 28: ಮತ ಎಣಿಕೆ