ಸರ್ಕಾರಿ ಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆ.
ಹನೂರು :ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ (ಕಲಿಕಾ ಕೇಂದ್ರ ಕ್ಕೆ )ಉಚಿತವಾಗಿ 2 ಕಂಪ್ಯೂಟರ್ ಗಳನ್ನ ಐ ಟಿ ಉದ್ಯೋಗಿ ವಿನೋದ್ ಜಿ ನೀಡಿದರು.
ಇಂಡಿಯನ್ ಸುಂದರ್ ಕಂಪ್ಯೂಟರ್ ಸೆಂಟರ್ ನ ಐ ಟಿ ಉದ್ಯೋಗಿ ವಿನೋದ್ ಜಿ ಮಾತನಾಡಿ ನಾವು ವಿತರಿಸುವ ಕಂಪ್ಯೂಟರ್ ಮಕ್ಕಳು ಉಪಯೋಗಿಸಿಕೊಳ್ಳಬೇಕು. ಈ ಕಂಪ್ಯೂಟರ್ ಶಿಕ್ಷಕರಿಗಲ್ಲ ಮಕ್ಕಳಿಗಾಗಿ ನೀಡಲಾಗಿತ್ತದೆ.ಮಕ್ಕಳು ಬಳಕೆ ಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಶಿಕ್ಷಕ ಮಾತನಾಡಿ ತಾಲೂಕಿನ ಜಿ ವಿ ಗೌಡ ಪ್ರೌಢ ಶಾಲೆ 20 ವರ್ಷಗಳಿಂದ ಬಣ್ಣ ಬಳಿಯದೆ ಬಿದ್ದಿದ್ದು, ಇದನ್ನ ಗಮನ ಹರಿಸಿ ಡಾ ವಿನೋದ್ ಜಿ ಅವರು ಶಾಲೆಗೆ ಬಣ್ಣ ಬಳಿಸಿದ್ದಾರೆ. ದಿನ್ನಳ್ಳಿ ಶಾಲೆಯ ಗ್ರಂಥಾಲಕ್ಕೆ ಹಲವಾರು ಪುಸ್ತಕಗಳನ್ನ ನೀಡಿದ್ದಾರೆ. ವಿವಿಧ ಪ್ರೌಢಶಾಲೆಗೆ ಬರೆಯುವ ಪುಸ್ತಕಗಳನ್ನು ನೀಡಿದ್ದಾರೆ.ಕಾಂಚಳ್ಳಿ, ಬಸಪ್ಪನದೊಡ್ಡಿ, ಸಾಹೇಬರ ದೊಡ್ಡಿ, ಬೈಲೂರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್ ನೀಡಿದ್ದಾರೆ. ಕಂಪ್ಯೂಟರ್ ಹೇಗೆ ಬಳಕೆ ಮಾಡುತ್ತೀರಾ ಅದರ ಮುಂದೆ ನಿಮ್ಮ ಶಾಲೆ ನಿಂತಿದೆ. ಕಂಪ್ಯೂಟರ್ ನ ಸದುಪಯೋಗ ಪಡಿಸಿಕೊಂಡರೆ, ಮುಂದೆಯೂ ಕೂಡ ಇವರಿಂದ ಬೇಕಾದ ಸಹಾಯ ನೀಡುತ್ತಾರೆ.
ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷ ಮುತ್ತುರಾಜು, ಸದಸ್ಯ ಲಕ್ಷ್ಮೀ ಜಡೇಸ್ವಾಮಿ, ಮುಕ್ಯೋಪಾಧ್ಯಾಯ ವೆಂಕಟೇಶ್,ಎಸ್ ಡಿ ಎಂ ಸಿ ಅಧ್ಯಕ್ಷ ಶಿವರಾಜು ,ಲೋಕ ಸೇವಾ ಪ್ರತಿಷ್ಠಾಪನ ಟ್ರಸ್ಟ್ ನ ಜಿಲ್ಲಾ ಸಂಯೋಜಕ ಅರುಣ್ ಜಿ, ರೂಪ,ಶರತ್,ಬಸವರಾಜು, ಶಿಕ್ಷಕರಾದ ರುಹುಲ್ಲಾ, ಪರಿಮಳ, ಮಾಲತಿ,ಸುಮಾ, ಆಶಾ ಹಾಗೂ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ


















