ಕೊಲ್ಹಾರ: ತಾಲೂಕಿನ ಸುಕ್ಷೇತ್ರ ಕವಲಗಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವರ ತೊಟ್ಟಿಲು ಕಾರ್ಯಕ್ರಮ ಜಾತ್ರಾ ಮಹೋತ್ಸವ ರವಿವಾರ ವಿಜೃಂಭಣೆಯಿಂದ ನಡೆಯಿತು.
ಬೀರಲಿಂಗೇಶ್ವರ ದೇವರ ಮೂರ್ತಿಗೆ ಅಭಿಷೇಕ, ಪುಷ್ಪಾರ್ಪಣೆ, ಅಲಂಕಾರ, ಗಂಗಾಸ್ಥಳಕ್ಕೆ ಪೂಜೆ ನಡೆಯಿತು. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು

ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದ ಬೀರಲಿಂಗೇಶ್ವರ ದೇವರ ತೊಟ್ಟಿಲು ಮೆರವಣಿಗೆಯಲ್ಲಿ, ಡೊಳ್ಳುಮೇಳ, ಭಜನೆ ಮೇಳ, ಕಳಸ ಹಿಡಿದ ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಪ್ಪ ನಿಡಗುಂದಿ, ಬಸಪ್ಪ ಗಡೆದ, ಭೀಮಸಿ ನಿಡಗುಂದಿ, ಬಿರಪ್ಪ ಪೂಜಾರಿ, ಬನ್ನೆಪ್ಪ ನಿಡಗುಂದಿ, ಸುಭಾಸ ಪಡೆಕನೂರ, ಶೇಖರ ನಿಡಗುಂದಿ ಹಾಗೂ ಮಹಿಳೆಯರು ಮತ್ತು ಅಕ್ಕನ ಬಳಗದವರು ಭಾಗವಹಿಸಿದರು.


















