VOJ ನ್ಯೂಸ್ ಡೆಸ್ಕ್: 2017ರಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಿದ್ದ ಭಾವನಾ ಮಲಯಾಳಂ ಸಿನಿಮಾ ರಂಗದಿಂದ ದೂರವೇ ಇದ್ದರು. ಮಾತ್ರವಲ್ಲ ಇದರ ನಡುವೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ದರೂ ಅವರಿಗೆ ನಟಿಸಲಾಗಿರಲಿಲ್ಲ.
ಜಾಕಿ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ಭಾವನಾ ಮೆನನ್ ಮಲಯಾಳಂ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. 2017 ರಲ್ಲಿ ಆಡಂ ಜಾನ್ ಎನ್ನುವ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದ ಭಾವನಾ ಮೆನನ್ ಐದು ವರ್ಷಗಳ ಕಾಲ ಯಾವುದೇ ಮಲಯಾಳಂ ಸಿನಿಮಾದಲ್ಲಿ ನಟಿಸಿರಲಿಲ್ಲ. ದೊಡ್ಡ ಗ್ಯಾಪ್ನ ನಂತರ ಇದೀಗ ಮತ್ತೆ ಮಾಲಿವುಡ್ನತ್ತ ಮುಖ ಮಾಡಿರುವ ಭಾವನಾ “ಎನ್ಟಿಕಕ್ಕಕ್ಕೋರು ಪ್ರೇಮಂರ್ಡನ್” ಎಂಬ ಸಿನಿಮಾದಲ್ಲಿ ಭಾವನಾ ನಟಿಸುತ್ತಿದ್ದಾರೆ.
ಮಾಲಿವುಡ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಸಂತಸದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಭಾವನಾ. ಇನ್ನು ಚಿತ್ರದ ಪೋಸ್ಟರ್ ಅನ್ನು ಭಾವನಾ ಹಂಚಿಕೊಂಡಿದ್ದದ್ದಾರೆ. ನೆಚ್ಚಿನ ನಟಿ ಮರಳಿ ಬಂದಿರುವುದನ್ನು ನೋಡಿ ಅಭಿಮಾನಿಗಳಂತೂ ಸಖತ್ ಖುಷಿಯಲ್ಲಿದ್ದಾರೆ.
2017ರಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಿದ್ದ ಭಾವನಾ ಮಲಯಾಳಂ ಸಿನಿಮಾ ರಂಗದಿಂದ ದೂರವೇ ಇದ್ದರು. ಮಾತ್ರವಲ್ಲ ಇದರ ನಡುವೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ದರೂ ಅವರಿಗೆ ನಟಿಸಲಾಗಿರಲಿಲ್ಲ. ಈ ವಿಷಯವನ್ನು ಸ್ವತಃ ಭಾವನಾ ಅವರೇ ಈ ಮೊದಲು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.