• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮೆಗಾ ಮಾರ್ಕೆಟ್‌ಗೆ ಪರ್ಯಾಯ ಕನ್ನಡ ಪದಬಳಕೆಗೆ ಆಗ್ರಹ..!

      Voiceofjanata.in

      March 5, 2025
      0
      ಮೆಗಾ ಮಾರ್ಕೆಟ್‌ಗೆ ಪರ್ಯಾಯ ಕನ್ನಡ ಪದಬಳಕೆಗೆ ಆಗ್ರಹ..!
      0
      SHARES
      125
      VIEWS
      Share on FacebookShare on TwitterShare on whatsappShare on telegramShare on Mail

      ಮೆಗಾ ಮಾರ್ಕೆಟ್‌ಗೆ ಪರ್ಯಾಯ ಕನ್ನಡ ಪದಬಳಕೆಗೆ ಆಗ್ರಹ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರ್‌ನಲ್ಲಿ ಪುರಸಭೆ ವತಿಯಿಂದ ಸರ್ಕಾರದ ೧೫ ಕೋಟಿ ರೂ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ವಾಣ ಜ್ಯ ಮಳಿಗೆ ಸಂಕೀರ್ಣಕ್ಕೆ ಪುರಸಭೆಯವರು ಮೆಗಾ ಮಾರ್ಕೆಟ್ ಎನ್ನುವ ಇಂಗ್ಲೀಷ್ ಪದಬಳಕೆ ಮಾಡತೊಡಗಿದ್ದಾರೆ. ಇದನ್ನು ಕೈಬಿಟ್ಟು ಪರ್ಯಾಯ ಕನ್ನಡ ಪದ ಬಳಕೆ ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಸಂಘ ಸಂಸ್ಥೆಗಳ ಪ್ರತಿನಿಧಿ ಸದಸ್ಯ ಕಿರಣರಾಜ ಪಾಟೀಲ, ಕನ್ನಡಾಭಿಮಾನಿ ತಾಜುದ್ದೀನ್ ಕರ್ಜಗಿ ವಕೀಲರು ಪೌರಾಡಳಿತಕ್ಕೆ ಆಗ್ರಹಿಸಿದ್ದಾರೆ.

      ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆಬ್ರವರಿ ೨೮ರಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಊರಿನ ಗಣ್ಯರ ಸಮ್ಮುಖ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವಾಗ ಸರ್ಕಾರಿ ಪ್ರೊಟೊಕಾಲ್ ಪ್ರಕಾರ ಮುದ್ರಿಸಿದ್ದ ಆಮಂತ್ರಣ ಪತ್ರಿಕೆಯಲ್ಲೂ ಮೆಗಾ ಮಾರ್ಕೆಟ್ ಎಂದೇ ಬಳಸಲಾಗಿತ್ತು. ಜೊತೆಗೆ ಎಲ್ಲ ಬ್ಯಾನರುಗಳಲ್ಲಿ, ಭಾಷಣಗಳಲ್ಲಿ ಇವೇ ಶಬ್ಧಗಳನ್ನು ಬಳಸಲಾಗಿತ್ತು. ಕನ್ನಡ ನಾಡಿನಲ್ಲಿರುವ ನಮಗೆ ಕನ್ನಡ ಆಡಳಿತ ಭಾಷೆಯಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಇದಕ್ಕೆ ಸ್ಪಂಧಿಸಿ ಸರ್ಕಾರ ಹಲವಾರು ಸುತ್ತೋಲೆಗಳನ್ನೂ ಹೊರಡಿಸಿ ಕನ್ನಡ ಬಳಕೆ ಕಡ್ಡಾಯಗೊಳಿಸಿದೆ. ಇದಲ್ಲದೆ ಫೆಬ್ರವರಿ ೧೫ರಂದು ಸುತ್ತೋಲೆಯೊಂದನ್ನು ಹೊರಡಿಸಿ ಕರ್ನಾಟಕ ರಾಜ್ಯದ ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಹೆಸರನ್ನು ಮುದ್ರಿಸುವಂತೆಯೂ ನಿರ್ದೇಶಿಸಲಾಗಿದೆ. ವಾಸ್ತವ ಹೀಗಿರುವಾಗ ಸರ್ಕಾರದ ಭಾಗವಾಗಿರುವ ಪುರಸಭೆ ಆಡಳಿತದವರು ಕನ್ನಡ ಬಳಕೆ ಮಾಡುವುದರ ಬದಲು ಇಂಗ್ಲೀಷ್ ಬಳಕೆ ಮಾಡಿದ್ದು ತಪ್ಪು. ಈಗಲೂ ಕಾಲ ಮಿಂಚಿಲ್ಲ. ಮುಂದಿನ ದಿನಗಳಲ್ಲಿ ಮಳಿಗೆಗೆ ಹೆಸರು ಇಡುವಾಗ, ಉದ್ಘಾಟನೆ ಸಂದರ್ಭ ಪರ್ಯಾಪ ಕನ್ನಡ ಪದಗಳ ಬಳಕೆ ಕಡ್ಡಾಯವಾಗಿ ಮಾಡಲು ಈಗಲೇ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದ್ದಾರೆ.

      ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿದೆ. ಹಿಂದೆ ೩ ಜಿಲ್ಲಾ, ೪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಕೀರ್ತಿ ಇಲ್ಲಿನವರಿಗಿದೆ. ಕನ್ನಡಪರ ಸಂಘಟನೆಗಳು ಕನ್ನಡ ಪ್ರೇಮ ತೋರಿಸಲು ಪೌರಾಡಳಿತಕ್ಕೆ ಈ ಕುರಿತು ಸಲಹೆ ಅಥವಾ ಮನವಿ ಮೂಲಕ ಆಗ್ರಹಿಸಿ ಬೆಂಬಲಕ್ಕೆ ನಿಲ್ಲುವ ಮೂಲಕ ಕನ್ನಡಕ್ಕೆ ಹೆಚ್ಚಿನ ಮನ್ನಣೆ ದೊರಕಿಸಿಕೊಡಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

      ಶ್ರವಣಬೆಳಗೊಳದಲ್ಲಿ ನಡೆದಿದ್ದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಸೇರಿ ಅನೇಕರಿಗೆ ನಾನು ಮಿನಿ ವಿಧಾನಸೌಧದಲ್ಲಿನ ಮಿನಿ ಇಂಗ್ಲೀಷ್ ಪದಕ್ಕೆ ಪರ್ಯಾಯ ಪದಬಳಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೆ. ಕಸಾಪದ ಆಗಿನ ರಾಜ್ಯಾಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿ ಹಲವರಿಗೆ ಪತ್ರವನ್ನೂ ನೀಡಿದ್ದೆ. ಸಂಘಟನಾತ್ಮಕ ಒತ್ತಾಯದ ಪರಿಣಾಮ ಮುಂದಿನ ವರ್ಷಗಳಲ್ಲಿ ಸರ್ಕಾರ ಮಿನಿ ವಿಧಾನಸೌಧವನ್ನು ತಾಲೂಕು ಆಡಳಿತ ಸೌಧ ಎಂದು ಬದಲಾಯಿಸಿ ಇಂಗ್ಲೀಷ್‌ನ ಮಿನಿ ಪದ ಬಳಕೆ ಕೈಬಿಟ್ಟಿತು ಎಂದು ಕಿರಣರಾಜ ಪಾಟೀಲ ತಮ್ಮ ಸಾತ್ವಿಕ ಹೋರಾಟಕ್ಕೆ ಸಂದ ಜಯದ ಕುರಿತು ಮಾಹಿತಿ ಹಂಚಿಕೊಡರು.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.