ಇಂಡಿಯಲ್ಲಿ ಜನಸಾಗರ ; ಎ – 17 ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ…!
ಇಂಡಿ : ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ಬೆಂಬಲಿಗರ ಜೊತೆ ಸೇರಿ ಬೃಹತ್ ಪ್ರಮಾಣದ ಮೆರವಣಿಗೆ ಮೂಲಕ ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಾಗುವುದು ಎಂದು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಅವರು, ಬರುವ ಮೇ 10 ನಡೆಯಲಿರುವ 2023 ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 17, ಬೆಳಿಗ್ಗೆ 10 ಘಂಟೆಗೆ ಬಿರಪ್ಪ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಆಡಳಿತ ಸೌಧದಕ್ಕೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದ್ದು, ನಾಳೆ ಸಂಪೂರ್ಣವಾಗಿ ಪಟ್ಟಣ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವ ನೀರಿಕ್ಷೆ ಇದೆ. ಇನ್ನೂ ಪ್ರತಿ ಗಾಮದಿಂದಲೂ ಯುವಕರು, ತಾಯಂದಿರು ಆಗಮಿಸಿಲಿದ್ದು ಜನ ಸಾಗರವೇ ಸೇರುತ್ತದೆ ಎಂದು ಹೇಳಿದರು.