ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..
ಇಂಡಿ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಇಂಡಿ ಬಿಜೆಪಿ ಮಂಡಳ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ ಮರಡಿ ಕಿಡಿಕಾರಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಇತ್ತಿಚಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡದೆ ಇರುವ ಬಗ್ಗೆ ರಾಜ್ಯದ ಮಹಿಳೆಯರಿಗೆ ಗೊತ್ತಾಗಿದೆ. ಇದು ಮಹಿಳೆಯರ ವಿರೋಧಿ ಸರಕಾರ ಎಂದು ಹೇಳದೆ ಯಾವುದೇ ತಪ್ಪಾಗಲಾರದು ಎಂದು ರಾಜ್ಯ ಸರಕಾರಕ್ಕೆ ತೀವಿದ್ದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ನಾರಿಶಕ್ತಿ ಎಂಬ ಘೋಷಣೆಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗಿವೆ. ಅದಲ್ಲದೇ ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಆರೋಪ ಹೊತ್ತೀರುವ ಸಚಿವ ಬಿ.ನಾಗೇಂದ್ರ ಅವರ ರಾಜಿನಾಮೆ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿದರು. ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು ಸಂಕಷ್ಟದ ಜೀವನ ಎದುರಿಸುವುದಲ್ಲದೆ, ರೈತರು ಜೀವ ಹಾನಿ ಮಾಡಿಕೊಳ್ಳುವ ಸಂದರ್ಭದ ಎದುರುಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ರಾಜ್ಯ ಸರಕಾರ ವಿಜಯಪುರ ಜಿಲ್ಲೆಯನ್ನು ಬರ ಜಿಲ್ಲೆ ಎಂದು ಘೋಷಣೆ ಮಾಡಿ ರೈತರಿಗೆ ವಿಶೇಷ ಪ್ಯಾಕೇಜ್ ಅನುದಾನ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಜಿ.ಪಂ ಕ್ಷೇತ್ರವಾರು ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು. ಇನ್ನೂ ಕೆರೆ ತುಂಬುವ ಯೋಜನೆ ಹಾಗೂ ಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಬದುಕಿಗೆ ಸಹಾಯ ಹಸ್ತ ನೀಡಬೇಕು. ಒಂದು ವೇಳೆ ಸರಕಾರ ಈ ಎಲ್ಲಾ ಕೆಲಸ ಮಾಡದೆ ಹೋದರೆ ಬರುವ ದಿನಮಾನಗಳಲ್ಲಿ ಈ ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಅದಲ್ಲದೇ ಬಿಜೆಪಿ ಮಹಿಳಾ ಮಂಡಳವತಿಯಿಂದ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
















