ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ಸ್ಫೋಟಕ ಬಳಸಿ ಕಟ್ಟಡಗಳ ಧ್ವಂಸ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಕ ಬಳಸಿ ಧ್ವಂಸಗೊಳಿಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಆ.15ರಂದು ಏಳು ಹಾಗೂ ಆ.17ರಂದು ಒಂದು ಸೇರಿ ಒಟ್ಟು ಎಂಟು ಶಿಬಿರಗಳನ್ನು ಜಿಲೆಟಿನ್ ಕಡ್ಡಿ ಮತ್ತು ಡೈನಾಮೆಟ್ ಬಳಸಿ ಸ್ಫೋಟಿಸಲಾಗಿದೆ. ಮೂರು ವಸತಿಗೃಹಗಳು, ಒಂದು ಜೀಪ್ ಹಾಗೂ ಸೋಲಾರ್ ಫೆನ್ಸಿಂಗ್‌ಗೂ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್‌ಪಿ ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳಬೇಟೆಯಲ್ಲಿ ತೊಡಗಿರುವ ದುಷ್ಕರ್ಮಿಗಳೇ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಎಸಿಎಫ್ ಮರಿಸ್ವಾಮಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
















