• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      ಪತ್ರಕರ್ತರೇ ಸಮಾಜದ ಕಾವಲುಗಾರರು..! | ಇಂಡಿಯಲ್ಲಿ ಪತ್ರಿಕಾ ದಿನಾಚರಣೆಯ ಸಂದೇಶ

      August 11, 2026
      0
      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ
      0
      SHARES
      0
      VIEWS
      Share on FacebookShare on TwitterShare on whatsappShare on telegramShare on Mail

      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      ಪತ್ರಕರ್ತರೇ ಸಮಾಜದ ಕಾವಲುಗಾರರು..! | ಇಂಡಿಯಲ್ಲಿ ಪತ್ರಿಕಾ ದಿನಾಚರಣೆಯ ಸಂದೇಶ

      ಸತ್ಯ–ನ್ಯಾಯಕ್ಕಾಗಿ ಪೆನ್ನು ಹಿಡಿದ ಪತ್ರಕರ್ತರಿಗೆ ಗೌರವ..! | ಇಂಡಿ ಪತ್ರಿಕಾ ದಿನಾಚರಣೆ

      ಇಂಡಿ: “ಪತ್ರಿಕೋದ್ಯಮವು ನಮ್ಮ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅತ್ಯಂತ ಪ್ರಬಲವಾದ ನಾಲ್ಕನೇ ಅಂಗವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ, ತಪ್ಪುಗಳನ್ನು ತಿದ್ದುವಲ್ಲಿ ಮತ್ತು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪತ್ರಕರ್ತರ ಜವಾಬ್ದಾರಿ ಹಾಗೂ ಕಠಿಣ ಶ್ರಮ ಹಿರಿದಾದುದು,” ಎಂದು ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿದಂಬರ ಬಂಡಗರ ಅವರು ಪತ್ರಕರ್ತರ ಕರ್ತವ್ಯದ ಕುರಿತು ವಿವರವಾಗಿ ಮಾತನಾಡಿದರು.
      ನಗರದ ಕ್ಷೇತ್ರಶಿಕ್ಷಣಾಧಿಜಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಚವಡಿಹಾಳ ಗ್ರಾಮದ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
      ಪತ್ರಕರ್ತರು ಸತ್ಯವನ್ನು ಹುಡುಕಿ ಬರೆಯಬೇಕು. ಸತ್ಯವಂತರಿಗೆ ಅನ್ಯಾಯವಾಗಲು ಬಿಡಬಾರದು. ಖಡ್ಗಕ್ಕಿಂತ ಪೆನ್ನಿನ ಬರವಣಿಗೆಯೇ ಸಾಧನ ಮಾಡಿಕೊಂಡು, ತಪ್ಪಿತಸ್ಥರು ಮಾಡಿದ ತಪ್ಪನ್ನು ಹೊರಗೆಳೆದು ಸಮಾಜದಲ್ಲಿ ಶಾಂತಿ, ನೆಮ್ಮದಿ ಇರುವಂತೆ ನೋಡಿಕೊಳ್ಳುವುದು ಸಹ ಪತ್ರಕರ್ತನ ಕರ್ತವ್ಯ ಎಂದರು.

      ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ್ ಅವರು, “ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ದೊಡ್ಡದಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ,” ಎಂದರು.

      ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, “ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಪತ್ರಿಕೆಗಳು ಪ್ರಮುಖ ಕೊಂಡಿಯಾಗಿವೆ. ಪತ್ರಕರ್ತರು ಸದಾ ಜನಪರ ಕಾಳಜಿಯೊಂದಿಗೆ ನಿಷ್ಪಕ್ಷಪಾತ ವರದಿಗಾರಿಕೆಗೆ ಆದ್ಯತೆ ನೀಡಬೇಕು,” ಎಂದು ಕರೆ ನೀಡಿದರು.

      ಹಿರಿಯ ಪತ್ರಕರ್ತ ಉಮೇಶ ಕೊಳೇಕರ ಅವರು ಮಾತನಾಡಿ, “ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಗ್ಗಿಲ್ಲ. ಪತ್ರಕರ್ತರು ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ,” ಎಂದು ತಿಳಿಸಿದರು.
      ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವುರ ಅವರು ಮಾತನಾಡಿ, “ಪತ್ರಕರ್ತರು ಮತ್ತು ಸರಕಾರಿ ನೌಕರರು ಸಮಾಜದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಷ್ಟ ಕಾಲದಲ್ಲಿ ಸಾರ್ವಜನಿಕರ ಪರವಾಗಿ ನಿಲ್ಲುವ ಪತ್ರಿಕಾ ರಂಗದ ಸೇವೆ ಸ್ಮರಣೀಯ,” ಎಂದರು.

      ಬಿಜೆಪಿ ಮುಖಂಡ ಅನೀಲ ಜಮಾದಾರ ಅವರು ಮಾತನಾಡಿ, “ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ತಡೆದು, ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು. ರಾಜಕೀಯ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ,” ಎಂದು ಶ್ಲಾಘಿಸಿದರು.

      ಜೆಡಿಎಸ್ ಮುಖಂಡ ಅಯುಬ ನಾಟೀಕಾರ ಮಾತನಾಡಿ, “ಪತ್ರಿಕೆಗಳು ಸಮಾಜದ ಕನ್ನಡಿಯಾಗಿದ್ದು, ದೇಶದ ಪ್ರತಿಯೊಂದು ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಪತ್ರಕರ್ತರ ಶ್ರಮಕ್ಕೆ ಗೌರವ ಸಿಗಬೇಕು,” ಎಂದು ಅಭಿಪ್ರಾಯಪಟ್ಟರು.

      ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, “ಪತ್ರಿಕೆಗಳು ಸತ್ಯದ ಹಾದಿಯಲ್ಲಿ ಸಾಗಬೇಕು ಮತ್ತು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಪತ್ರಕರ್ತರು ತಮ್ಮ ಪ್ರಾಣದ ಹಂಗು ತೊರೆದು, ಹಗಲಿರುಳು ಶ್ರಮಿಸಿ ಸಮಾಜದ ನೈಜ ಚಿತ್ರಣವನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ಸೇವೆ ಅನನ್ಯವಾದುದು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ” ಎಂದು ಪತ್ರಕರ್ತರ ಕಠಿಣ ಶ್ರಮವನ್ನು ಕೊಂಡಾಡಿದರು. “ಬೆಳಗಿನ ಜಾವ ಚಳಿ, ಮಳೆ ಎನ್ನದೆ ಕಷ್ಟಪಟ್ಟು ಮನೆಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಶ್ರಮವೂ ಶ್ಲಾಘನೀಯ. ಅವರ ಹಿತದೃಷ್ಟಿಯಿಂದ ಮಳೆಗಾಲದಲ್ಲಿ ಅನುಕೂಲವಾಗುವಂತೆ ರೇನ್‌ಕೋಟ್ ನೀಡಿ ಗೌರವಿಸುತ್ತಿರುವುದು ಅತ್ಯಂತ ಪುಣ್ಯದ ಮತ್ತು ಹೆಮ್ಮೆಯ ಕಾರ್ಯ” ಎಂದು ಹರಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚವಡಿಹಾಳದ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾAತ ದಶವಂತ ಅವರು, “ಪತ್ರಿಕಾ ರಂಗವು ಸಮಾಜದ ಮುಖವಾಡವನ್ನು ಕಳಚಿ ನೈಜ ಸ್ಥಿತಿಯನ್ನು ಬಿಂಬಿಸುವ ಶಕ್ತಿ ಹೊಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವಲ್ಲಿ ಪತ್ರಕರ್ತರೊಂದಿಗೆ ವಿತರಕರ ಶ್ರಮವೂ ಅಪಾರವಾಗಿದೆ” ಎಂದು ತಿಳಿಸಿದರು.
      ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ವೈ. ಗೊರನಾಳ, ವೈ.ಜಿ. ಬಿರಾದಾರ ಮಾತನಾಡಿದರು.

      ವೇದಿಕೆಯಲ್ಲಿ ಹೆಸ್ಕಾಂ ಎಇ ಸಂಗಮೇಶ ಮೇಡೇದಾರ, ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಪಿ, ಹಿರಿಯ ಪತ್ರಕರ್ತರಾದ ಎ.ಸಿ. ಪಾಟೀಲ, ಆರ್.ಬಿ. ಸಿಂಪಿ, ನಿಜಣ್ಣ ಕಾಳೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಯಮನಾಜಿ ಸಾಳುಂಕೆ, ಪ್ರಕಾಶ ಐರೊಡಗಿ ಇದ್ದರು.
      ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇನೂರ, ನಿಂಗನಗೌಡ ಬಿರಾದಾರ, ಖಾಜು ಸಿಂಗೆಗೋಳ, ಶಂಕರ ಜಮಾದಾರ, ಶರಣು ಕಾಂಬಳೆ, ಆನಂದ ಗಣಾಚಾರಿ, ಸಚಿನ್ ಇಂಡಿ, ಮಲ್ಲಿಕಾರ್ಜುನ ಹಾವಿನಾಳಮಠ,Áಮಚಂದ್ರ ಯಂಕAಚಿ, ಫಯಾಜ ಬಾಗವಾನ, ಸಿದ್ದು ಕೋಷ್ಠಿ, ಸಿದ್ದು ಹತ್ತಳ್ಳಿ, ಅಲ್ಲಾಭಕ್ಷ ಗೋರೆ, ಸಂಜು ಕೋಳಿ, ಕಾಶೀನಾಥ ಕ್ಷತ್ರಿ, ಅರವಿಂದ ಕಾಂಬಳೆ, ತುಕಾರಾಮ ಪವಾರ, ಲಾಲಸಿಂಗ ರಾಠೋಡ, ಆನಂದ ಅಗರಖೇಡ, ಸೇರಿದಂತೆ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ತಾಲೂಕಿನ ಪತ್ರಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

      ಇಂಡಿ: ನಗರದ ಕ್ಷೇತ್ರಶಿಕ್ಷಣಾಧಿಜಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಚವಡಿಹಾಳ ಗ್ರಾಮದ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ವಿತರಕರನ್ನು ಸತ್ಕರಿಸಲಾಯಿತು.

      ಇಂಡಿ: ನಗರದ ಕ್ಷೇತ್ರಶಿಕ್ಷಣಾಧಿಜಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಚವಡಿಹಾಳ ಗ್ರಾಮದ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

      ಇಂಡಿ: ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರನ್ನು ಸತ್ಕರಿಸಲಾಯಿತು.

      Tags: #A salute to journalists who stand up for the truth! | Grand Press Day celebration in Indi#indi / vijayapur#Public News#State News#Today News#VOICE OF JANATA (VOJ-VOJ)#Voice Of Janata Desk News#Voiceofjanata.in#ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      ಸತ್ಯದ ಪರ ನಿಲ್ಲುವ ಪತ್ರಕರ್ತರಿಗೆ ಸಲಾಂ..! | ಇಂಡಿಯಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ

      August 11, 2026
      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      August 10, 2026
      ಲಚ್ಯಾಣ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂದು ಲಕ್ಷ ಬಿಲ್ವಾರ್ಚನೆ ಮಹೋತ್ಸವ | ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

      ಲಚ್ಯಾಣ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂದು ಲಕ್ಷ ಬಿಲ್ವಾರ್ಚನೆ ಮಹೋತ್ಸವ | ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

      August 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.