ಬಹುಭಷಾ ಖ್ಯಾತ ನಟ ಪ್ರದೀಪ್ ಸಿಂಗ್ ರಾವತ್ ನಿಧನ
Voiceofjanata.in : ಬಹುಭಷಾ ಖ್ಯಾತ ನಟ ಪ್ರದೀಪ್ ಸಿಂಗ್ ರಾವತ್ (74) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಾ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಆಗಸ್ಟ್ 4, 2026 ರಂದು ಮಂಗಳವಾರ ಸಂಜೆ ನಿಧನರಾದರು. ಇವರು ಹಿಂದಿಯ ‘ಗಜಿನಿ’, ‘ಲಗಾನ್’ ಹಾಗೂ ಕನ್ನಡದ ‘ಗಜ’ ಮುಂತಾದ ಚಿತ್ರಗಳಲ್ಲಿ ಪ್ರಸಿದ್ಧ ಖಳನಾಯಕನಾಗಿ ನಟಿಸಿದ್ದರು.
ಖ್ಯಾತ ಖಳನಾಯಕ ಪ್ರದೀಪ್ ರಾವತ್ ಇಂದು ನಿಧನರಾದರು. ಕನ್ನಡದ ʻಗಜʼ, ತಮಿಳಿನ ʻಗಜಿನಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳ ನಾಯಕನಾಗಿ ನಟಿಸಿದ್ದ ಪ್ರದೀಪ್ ರಾವತ್ ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನ ಸಹನಟ ಯಶ್‌ಪಾಲ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ‘ಗಜಿನಿ’, ‘ಲಾಗಾನ್’ ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿʼ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದು ಯಶ್‌ಪಾಲ್ ಶರ್ಮಾ ಸಂತಾಪ ಸೂಚಿಸಿದ್ದಾರೆ.
ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು, ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ನಟ ಪ್ರದೀಪ್ ರಾವತ್ ಹಿನ್ನೆಲೆಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನಾಗಿ ನಟಿಸಿ ಖ್ಯಾತಿ ಪಡೆದರು.’ಸರ್ಫರೋಶ್’, ‘ಲಗಾನ್’, ‘ಗಜಿನಿ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಕನ್ನಡದ ‘ಗಜ’ ಚಿತ್ರದಲ್ಲೂ ದರ್ಶನ್ ಜೊತೆ ನಟಿಸಿದ್ದರು.ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

















