ನೂತನ ಬಿಇಓ ಮೋಹನಕುಮಾರ ಅವರಿಗೆ ಸ್ವಾಗತದ ಸನ್ಮಾನ
ಇಂಡಿ: ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಮೋಹನಕುಮಾರ ಪಿ ಅವರನ್ನು ಇಂದು ಅವರ ಕಚೇರಿಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ಜಿಪಿಟಿ) ವತಿಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಬಿಇಓ, ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಶ್ರಮಿಸೋಣ. ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡೋಣ. ಶಾಲೆಯ ಸರ್ವಾಂಗೀಣ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ, ಶಿಕ್ಷಣ ಸಂಯೋಜಕ ಆನಂದ ಹುಣಸಗಿ, ಜಿಪಿಟಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಂಕರ ಕೋಳೆಕರ,ಕಾರ್ಯಾಧ್ಯಕ್ಷ ಚಂದ್ರಶೇಖರ ಹಕಾರಿ, ಖಜಾಂಚಿ ಶಶಿಕುಮಾರ ವಡ್ಡರ, ಪ್ರಧಾನ ಕಾರ್ಯದರ್ಶಿ ಹನಮಂತರಾಯ ಪೂಜಾರಿ, ಪದಾಧಿಕಾರಿಗಳಾದ ಸಂತೋಷ ಬಂಡೆ, ಮಹಾದೇವ ಗಬಸಾವಳಗಿ, ಸೋಮಲಿಂಗಪ್ಪ ಅಂಗಡಿ, ಶೇಖರಬಾಬು ಭೀರನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















