ಭೀಮಾ ನದಿಗೆ ನೀರು ಬಿಡುಗಡೆ ಹೋರಾಟಕ್ಕೆ ಕರವೇ ಬೆಂಬಲ: ಶ್ರೀಕಾಂತ ದಿವಾಣಜಿ
ಅಫಜಲಪುರ: ಭೀಮಾ ನದಿಗೆ ತಕ್ಷಣ ನೀರು ಬಿಡುಗಡೆ ಮಾಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿತು.
ಕರವೇ ತಾಲೂಕು ಅಧ್ಯಕ್ಷ ಶ್ರೀಕಾಂತ ದಿವಾಣಜಿ ಮಾತನಾಡಿ, ರೈತರ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಕೂಡಲೇ ಭೀಮಾ ನದಿಗೆ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು. ರೈತರ ಬೇಡಿಕೆಗಳನ್ನು ನಿರ್ಲಕ್ಷಿಸದೇ ತಕ್ಷಣ ಈಡೇರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಕರವೇ ರೈತರೊಂದಿಗೆ ಕೈಜೋಡಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ಲತೀಪ್ ಪಟೇಲ್, ಮನ್ಸೂರ್ ಪಟೇಲ್, ಮಹಿಳಾ ಅಧ್ಯಕ್ಷೆ ಸೌಮ್ಯ ಪಟ್ನಾ, ಮಹಿಳಾ ಉಪಾಧ್ಯಕ್ಷೆ ಪ್ರಿಯಾಂಕ ಕೋರಿ, ಪ್ರಧಾನ ಕಾರ್ಯದರ್ಶಿ ಔರಂಗಜೇಬ್ ಮುಜಾವರ್, ವಿಜಯಕುಮಾರ ಚವ್ಹಾಣ, ಮಾಂತೇಶ ಪಾಟೀಲ, ಮಲ್ಲು ಮರಬ, ರಾಕೇಶ್ ಗಾಯಕವಾಡ, ಹಸನ್ ಮುಲ್ಲಾ, ಮಹಿಬೂಬ್ ನಧಾಪ್ ಸೇರಿದಂತೆ ಕರವೇಯ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
.


















