ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ
ಇಂಡಿ : ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ. ಎಸ್ ಇಂಡಿ ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ಲಕ್ಷ್ಮೀ ಕೆಂಚಪ್ಪ ಜಮಾದಾರ ಎಂಬ ವಿಧ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 572 ಅಂಕಗಳು, ಪ್ರತಿಶತ 91.52√ ಗಳಿಸುವ ಮೂಲಕ ಉತ್ತಮವಾದ ಸಾಧನೆಗೈದಿದ್ದಾರೆ. ತಾಲ್ಲೂಕಿನ ಗೊಳಸಾರ ಗ್ರಾಮದಲ್ಲಿರುವ ಪುಂಡಲಿಂಗೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಿಯುತ್ತೀರುವ ಲಕ್ಷ್ಮೀ ಅಮೋಘ ಸಾಧನೆ ಮಾಡಿದ್ದಾರೆ. ಬಡತನ ಇದ್ದರೂ ಶ್ರೀಮಂತಿಕೆ ಬೇಡ, ಸಾಧನೆ ಮಾಡಲು ಛಲ ಅವಶ್ಯಕತೆ ಎಂಬ ವಿಚಾರವನ್ನು ಈ ವಿಧ್ಯಾರ್ಥಿನಿ ಮಾಡಿ ತೋರಿಸಿದ್ದು ಹೆಮ್ಮೆಯ ಸಂಗತಿ ಎಂದು ತಳವಾರ ಸಮಾಜದ ಯುವ ಮುಖಂಡ ಅಭಿಶೇಕ ರಾಮಶೇಖರ ಜಮಾದಾರ ಹರ್ಷ ವ್ಯಕ್ತ ಪಡಿಸಿ ಮಾತನಾಡಿದರು. ಇಂದು ನಮ್ಮ ತಳವಾರ ಸಮಾಜದಲ್ಲಿ ಅಸಾಮಾನ್ಯ ವಿಧ್ಯಾರ್ಥಿ/ವಿಧ್ಯಾರ್ಥಿನಿಗಳನ್ನು ಕಾಣುತ್ತಿದ್ದೆವೆ. ಅಂತಹ ಸಾಧಕರಿಗೆ ನಮ್ಮ ಸಮಾಜ ಯಾವಾಗಲೂ ಬೆಂಬಲ ವಿರುತ್ತೆದೆ. ಅವರು ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡಲಿ ಎಂದು ತಿಳಿಸಿದರು. ಇವತ್ತು ಲಕ್ಷ್ಮೀಯ ಸಾಧನೆ ಇಡಿ ತೆಗ್ಗಿಹಳ್ಳಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.


















