“ಶ್ರೀ ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ
ವಿಜಯಪುರ: ತಾಲೂಕಿನ ನಾಗಠಾಣದ ಸರಕಾರಿ ಪ್ರೌಢಶಾಲೆಗೆ ಇದೀಗ ಪ್ರಕಟಿತ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರತಿಶತ 92.43 ರಷ್ಟು ಫಲಿತಾಂಶ ಬಂದಿದ್ದು ಪರೀಕ್ಷೆಗೆ ಹಾಜರಾದ 119 ಮಕ್ಕಳಲ್ಲಿ 110 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶಾಲೆಗೆ ಪ್ರಥಮ ಸ್ಥಾನ ಪಡೆದ ಸ್ನೇಹಾ ಬಂಡೆ 604 ದ್ವಿತಿಯ ಸ್ಥಾನ ಪಡೆದ ಪೂಜಾ ನಂದಿಕೋಲ ಮತ್ತು ರಾಣಿ ಇಂಡಿ 586 ತೃತಿಯ ಸ್ಥಾನದಲ್ಲಿರುವ ಸೃಷ್ಠಿ ಅರಕೇರಿ 584 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಒಟ್ಟು ಫಲಿತಾಂಶದಲ್ಲಿ ಡಿಸ್ಟಿಂಕ್ಷನದಲ್ಲಿ 15 ಪ್ರಥಮ ಸ್ಥಾನದಲ್ಲಿ 44 ದ್ವಿತಿಯ ಸ್ಥಾನದಲ್ಲಿ 20 ಮಕ್ಕಳು ಪಾಸಾಗಿರುತ್ತಾರೆ. ಅದರಂತೆ ಕನ್ನಡದಲ್ಲಿ 3 ಸಮಾಜ ವಿಜ್ಞಾನದಲ್ಲಿ 3 ಹಿಂದಿಯಲ್ಲಿ 07 ಮಕ್ಕಳು 100ಕ್ಕೆ 100 ಅಂಕಗಳನ್ನು ಪಡೆದುಕೊಳ್ಳುವ ಜೊತೆಗೆ ಆಂಗ್ಲಭಾಷೆಯಲ್ಲಿ ಎಲ್ಲಾ ಮಕ್ಕಳು ಉತ್ತೀರ್ಣರಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರವಿ ಮೇತ್ರಿ ಉಪಪ್ರಾಚಾರ್ಯ ಪ್ರಮೋದ ಮೆಂಚ ಸಮಸ್ತ ಶಿಕ್ಷಕ ಸಿಬ್ಬಂದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಶ್ರೀ ಪ್ರಮೋದ.ರೇ.ಮೆಂಚ್
ಉಪ ಪ್ರಾಂಶುಪಾಲರು
ಕೆಪಿಎಸ್ ನಾಗಠಾಣ ತಾ.ಜಿ.ವಿಜಯಪುರ
ಮೊ.99720 87236


















