ದುಷ್ಟರ ವಿರುದ್ಧ ಕಹಳೆ ಕೂಗಿದ ತಳವಾರರು..!
ವಿಜಯಪುರ : ತಳವಾರ ಸಮಾಜವನ್ನು ಸಂಘಟಿಸಿ ಬಲಿಷ್ಠವಾಗಿ ಕಟ್ಟೊಣ ಎಂದು ತಳವಾರ ಸಮಾಜ ಹಿರಿಯ ಮುಖಂಡ ನಿವೃತ್ತ ಶಿಕ್ಷಕ ಬಿ.ಎಸ್ ತಳವಾರ ಹೇಳಿದರು.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಅಣಚಿ ಗ್ರಾಮದಲ್ಲಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ತಳವಾರ ಸೇವಾ ಸಮಿತಿ (ರಿ) ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ನಮ್ಮ ತಳವಾರ ಸಮಾಜ ಜನರು ಸುಮಾರು 2 ಲಕ್ಷಕ್ಕಿಂತ ಹೆಚ್ಚಿ ಸಂಖ್ಯೆಯಲ್ಲಿದ್ದರೂ ಯಾವುದೇ ಪ್ರಯೋಜನೆವಾಗಿಲ್ಲ. ಕೇವಲ ಮತಬ್ಯಾಂಕಗಾಗಿ ನಮ್ಮನ್ನು ಉಪಯೋಗ ಮಾಡಿಕೊಳ್ಳುತ್ತಾರೆ ವಿನಃ ಯಾವುದೇ ಅವಕಾಶ ನೀಡುವುದಿಲ್ಲ. ಹಾಗಾಗಿ ಯುವಕರು ಇಂದಿನ ಪರಿಸ್ಥಿತಿ ಅರ್ಥಮಾಡಿಕೊಂಡು ಶಸಕ್ತ ಹಾಗೂ ಗಟ್ಟಿ ಸಮಾಜವನ್ನು ಕಟ್ಟಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಸೋಮು ಜಮಾದಾರ, ಬಿಎ ಬಿಲ್ಕರ್, ಧರ್ಮರಾಯ ಪೂಜಾರಿ ಮಾತನಾಡಿದ ಅವರು, ತಳವಾರ ಸಮಾಜದ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ನಕಲಿ ಜಾತಿ ಪ್ರಮಾಣ ಪಡೆಯುತ್ತಿದ್ದಾರೆಂದು ಹೇಳುತ್ತಾ, ಯಾವುದೇ ಸಾಕ್ಷಿಗಳಿಲ್ಲದೆ ಸುಖಾ ಸುಮ್ಮನೆ ತಳವಾರ ಸಮಾಜದ ಮೇಲೆ ನಿರಂತರವಾಗಿ ಅಧಿಕಾರಿಗಳಿಗೆ ದೂರು ನೀಡುವುದಲ್ಲದೆ ಗೊಂದಲ ಸೃಷ್ಟಿ ಮಾಡುವ ಷಡ್ಯಂತ್ರ ನಡೆದಿದೆ. ಇನ್ನೂ ಕೆಲವರು ಸಹೋದರ ಸಮಾಜ ಎಂದು ಬಿಂಬಿಸಿಕೊಂಡು ಸಮಾಜಕ್ಕೆ ಅನ್ಯಾಯ ಮಾಡಲು ಹೋರಟರೆ, ಕೆಲವರು ಸ್ವಾರ್ಥಕ್ಕಾಗಿ ಪ್ರಚಾರಕ್ಕಾಗಿ ಸುಳ್ಳು ಸುಳ್ಳು ಸುದ್ದಿಗೋಷ್ಠಿ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಇನ್ನೂ ತಳವಾರ ಸಮಾಜದ ಕೈ ಬೆರಳಿನ ಏಣಿಕೆ ವ್ಯಕ್ತಿಗಳ ಮೇಲೆ ಉದ್ದೇಶಪೂರ್ವಕವಾಗಿ ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದಾರೆ ಎಂದು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಅದು ಇಡೀ ಸಮಾಜಕ್ಕೆ ಎಂಬ ಪ್ರಚಾರವನ್ನು ನಡೆದಿದ್ದು ನೋವಿನ ಸಂಗತಿ. ಈ ಪ್ರಕರಣವನ್ನು ಏನು ಅರಿಯದ ವಿರೋಧಿ ಸಮುದಾಯದ ಮುಖಂಡರು
ಸುದ್ದಿಗೋಷ್ಟಿ ಮಾಡುವ ಮೂಲಕ ಸಾರ್ವಜನಿಕ ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಸಾಕ್ಷಿಗಳಿಲ್ಲದೆ ಆರೋಪ ಮಾಡುವ ಮುಖಂಡರ ಮಾತು ಯಾರು ನಂಬಬಾರದು. ಇನ್ನೂ ಸಮುದಾಯದಲ್ಲಾಗಲಿ ಅಥವಾ ಹೊರ ಸಮುದಾಯದಲ್ಲಾಗಲಿ ಯಾವುದೇ ಆರೋಪ ಮತ್ತು ಪ್ರತ್ಯಾರೋಪ ಮಾಡುವ ವ್ಯಕ್ತಿಗಳು ಸರಿಯಾದ ಸಾಕ್ಷಿಗಳನ್ನು ಇಟ್ಟುಕೊಂಡು ಮಾತನಾಡಬೇಕು. ಸುಳ್ಳು ಸುಳ್ಳು ಹೇಳಿ ಸಮಾಜಕ್ಕೆ ದಾರಿ ದಿಕ್ಕು ತಪ್ಪಿಸಬಾರದೆಂದು ವಿನಂತಿ ಮಾಡಿಕೊಂಡರು.
ಇನ್ನೂ ಅಣಚಿ ಗ್ರಾಮ ಘಟಕದ ನೂತನ ಅಧ್ಯಕ್ಷ ಉಮೇಶ ಮಾತನಾಡಿದ ಅವರು, ಬುಡಕಟ್ಟು ಜಾತಿಗಳು ಅಧಿಕೃತವಾಗಿ ಘೋಷಣೆಯಾಗಿದ್ದು 1935 ರ ಬ್ರಿಟಿಷ್ ರಾಣಿ ಎಲಿಜಬೆತ್ ಗೆಜಟ್ ಪ್ರತಿಯಲ್ಲಿ ಕಾಣುತ್ತೆವೆ. ಅದೇ ಗೆಜಟ್ ಪ್ರತಿಯಲ್ಲಿ ಪ್ರಾಂತವಾರು ಜಾತಿಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಮುಂಬೈ ಕರ್ನಾಟಕದಲ್ಲಿ ನಾಯ್ಕಡ್/ನಾಯಕ ಜಾತಿಗಳನ್ನು ಗುರುತಿಸಿದ್ದು ಇರುತ್ತದೆ. ಅದರ ಪರಿಯಾಯ ಅಥವಾ ಸಮಾನಾರ್ಥಕ ಜಾತಿಯ ತಳವಾರರೆ ನಾವೇ ಎಂದು ಹೇಳಿದರು. ತಳವಾರ ಎಂದರೇನು..? ಈ ಪದವೇ ಸೂಚಿಸುವಂತೆ ತಲವಾರವನ್ನು ಹಿಡಿದು ಗ್ರಾಮ ರಕ್ಷಣೆ ಮಾಡುವವರೆ ತಳವಾರರು. ಇನ್ನೂ ನಮ್ಮ ಸಮುದಾಯದಲ್ಲಿ ಬರುವ ತಳವಾರ,ನಾಯಕೋಡಿ, ನಾಟೀಕಾರ, ವಾಲಿಕಾರ, ಗಸ್ತಿ, ಕೋಟಾರಗಸ್ತಿ, ಚೋರಗಸ್ತಿ ಇವುಲ್ಲ ಪದಗಳು ಸೂಚಿಸುವುದೆ ರಕ್ಷಣೆ ಎಂಬ ಅರ್ಥವನ್ನು ಹೊರಹಾಕುತ್ತದೆ. ಹಾಗಾಗಿ ನಾವು ಸ್ವತಂತ್ರಪೂರ್ವದಲ್ಲಿ ಇಡೀ ಗ್ರಾಮವನ್ನು ರಕ್ಷಣೆ ಮಾಡುವುದು, ಬ್ರಿಟಿಷ್ ಅಧಿಕಾರಿಗಳಿಗೆ ಸ್ಥಳೀಯ ಮಾಹಿತಿ ಕೊಡುವುದು, ಸುಂಕ ಸಂಗ್ರಹಿಸುವುದು ಹೀಗೆ ಹಲವಾರು ಕೆಲಸಗಳನ್ನು ಸರಕಾರದ ಒಂದು ಭಾಗವಾಗಿ ಕೆಲಸ ಮಾಡುವ ಕಾರ್ಯವನ್ನು ಮಾಡಿದ್ದೆವೆ. ಅದಕ್ಕೆ ಬಳುವಳುಯಾಗಿ ಇನಾಮಿ ಜಮೀನು ಕೊಟ್ಟ ಉದಾಹರಣೆ ಇದೆ ಎಂದು ಹೇಳಿದರು. ಇನ್ನೂ ಯಾರೋ ದುಷ್ಟರು ಆರೋಪ ಮಾಡುವ ಬಗ್ಗೆ ಕಿವಿಕೊಡದೆ ನಮ್ಮ ಕೆಲಸ ಕಾರ್ಯಗಳು ಮಾಡಬೇಕು. ಇನ್ನೂ ಸಮಾಜ ಮುಂದು ಬರಬೇಕಾದರೆ ಸಂಘಟಕರಾಗಬೇಕು. ಇನ್ನೂ ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕೊರತೆಯಿದೆ. ಅದನ್ನು ಸರಿಪಡಿಸಲು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇನ್ನೂ ಈ ಸಂದರ್ಭದಲ್ಲಿ ಕುಬೇರಗೌಡ ಪಾಟೀಲ, ಶಂಕರ ಕಮಳೆ, ಬಸಗೊಂಡ ವಾಲಿಕಾರ, ಅವಿನಾಶ್ ಯಂಕಂಚಿ, ವಿಠ್ಠಲ ಹಿಂಗಣಿ, ಲಾಯಪ್ಪ ಉಮರಾಣಿ, ಧರ್ಮರಾಯ ವಾಲಿಕಾರ, ತುಕಾರಾಮ ಪೂಜಾರಿ, ಪಾಂಡುರಂಗ ಪೂಜಾರಿ, ಗಜಾನಂದ ಹಿಂಗಣಿ, ಪ್ರಭಾಕರ ಬೂದಿಹಾಳ, ಚಂದ್ರಕಾಂತ ಬೂದಿಹಾಳ, ನಾಗರಾಜ ಉಮರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















