ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..
ಇಂಡಿ: ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ ಎಂದು ತಾಲೂಕಿನ ಹಿರೇಬೇವನೂರು ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರೌಢಶಾಲೆಯ ನೂತನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದ ಅಧೀಕ್ಷಕ ಪಿ.ಯು. ರಾಠೋಡ ಹೇಳಿದರು.
ಅವರು ಬುಧವಾರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿ ದೈರ್ಯ ತುಂಬಲು ವಿನೂತನವಾದ ಕಾರ್ಯಕ್ರಮ ನಡೆಯಿತು.
ಗ್ರಾಮದ ಪೂಜ್ಯ ದಯಾನಂದ ಹಿರೇಮಠ್, ಸಂಸ್ಥೆಯ ಅಧ್ಯಕ್ಷ ವಿ.ಜಿ.ಕಲ್ಮನಿ, ಆಡಳಿತ ಅಧಿಕಾರಿ ಶ್ರೀದೇವಿ ಕಲ್ಮನಿ, ಪರೀಕ್ಷೆಯ ಕೇಂದ್ರದ ಮುಖ್ಯ ಅಧೀಕ್ಷಕ ಪಿ.ಯು. ರಾಠೋಡ್, ಕಸ್ಟೋಡಿಯನ್ ಜಿ.ಎಸ್. ಹೊಸಮನಿ, ಕೊಠಡಿ ಮೇಲ್ವಿಚಾರಕರು ಸಂಸ್ಥೆಯ ಸಿಬ್ಬಂದಿ ವರ್ಗದವರು ಗುಲಾಬಿ ಪುಷ್ಪವನ್ನು ನೀಡಿ ಹೃದಯಪೂರ್ವಕವಾಗಿ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ದೈರ್ಯ ತುಂಬಿದರು. ವಿದ್ಯಾರ್ಥಿಗಳು ಸಂತಸದಿAದ ಪರೀಕ್ಷೆಗೆ ಹಾಜರಾದರು. ಮೊದಲನೇ ದಿನದ ಪರೀಕ್ಷೆ ಶಾಂತಿಯುತವಾಗಿ ಯಶಸ್ವಿಯಾಗಿ ಜರುಗಿತು.
ಇಂಡಿ: ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿ ದೈರ್ಯತುಂಬಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿ ಕೊಡಲಾಯಿತು.




















