ಇಂಡಿ | ಇಂಡಿ ತಾಲೂಕಿನ ತಾಂಬಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ 224 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಪೆನ್ನು ಕೊಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಕೆ. ಬಿರಾದಾರ, ಉಪಾಧ್ಯಕ್ಷ ವಿಠ್ಠಲ ಹೋರ್ತಿ, ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಈ ಎಸ್ ಐ ಪ್ರದೀಪ್ ರಾಠೋಡ್, ಶಿಕ್ಷಕರಾದ ಸದಾಶಿವ ಅಂಬಾರೆ, ಜಿ.ಎ.ದುದಗಿ, ಜಿ.ಎಸ್.ಬಂದಿ, ಎಸ್.ಆರ್. ಭೋಸಲೆ, ಎಸ್.ವ್ಹಿ.ಮುಂಜಿ, ಎಸ್.ಜಿ.ಬಾಣಿಕೊಲ, ಜೋತಿ ಕನ್ನೂರ, ಎಸ್.ಎಸ್. ಖೇಡದ, ಎ.ಎಸ್.ಹರವಾಳ, ಮತ್ತು ಎಸ್.ಡಿ.ಎಮ್.ಸಿ. ಸದಸ್ಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ಮುಂತಾದವರು ಪಾಲ್ಗೊಂಡಿದ್ದರು.